ಹೊನ್ನಾವರ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ಅಂಗಡಿ ಇಡಲು ಅವಕಾಶ ನೀಡಿ: ಪಂಚಾಯತ್ ಸದಸ್ಯರ ಒತ್ತಾಯ:
ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡದವರಿಗೆ ಏಕೆ ಎಂದು ಪ್ರಶ್ನೆ?

ಉತ್ತರಕನ್ನಡದಲ್ಲೂ ಕೇಳಿ ಬಂತು ಹಿಂದೂ ಜಾತ್ರೆಗಳಲ್ಲಿ ಅನ್ಯಕೋಮಿನವರ ಅಂಗಡಿಗೆ ನಿಷೇಧದ ಕೂಗು?

ಹೊನ್ನಾವರ: ನೆರೆ ಜಿಲ್ಲೆ ದಕ್ಷಿಣಕನ್ನಡ ಹಾಗೂ ಶಿವಮೊಗ್ಗದಲ್ಲಿ ಉದ್ಭವಿಸಿದ ಜಾತ್ರೆ ಮಾರುಕಟ್ಟೆ ಮಳಿಗೆ ಹರಾಜು ವಿವಾದದ ಹೊನ್ನಾವರ ಪಟ್ಟಣ‌ಪಂಚಾಯತ್ ಸಭೆಯಲ್ಲಿ ಚರ್ಚೆಯಾಯಿತು. ಕಳೆದ ಒಂದು ವಾರದಿಂದ ರಾಜ್ಯದ ವಿವಿಧಡೆ ಉಂಟಾದ ಗೊಂದಲ ಸಭೆಯ ಮುಕ್ತಾಯದ ವೇಳೆಗೆ ಚರ್ಚೆಗೆ ಕಾರಣವಾಯಿತು.

ವಿಷಯ ಪ್ರಸ್ತಾಪಿಸಿದ ವಿಜಯ ಕಾಮತ್ ಹಾಗೂ ಮಹೇಶ ಮೇಸ್ತ್‌ ಏಪ್ರಿಲ್ 10ರಂದು ಹೊನ್ನಾವರ ಜಾತ್ರೆ ನಡೆಯಲಿದೆ. ಈ ಸಮಯದಲ್ಲಿ ಯಾವ ರೀತಿಯಾಗಿ ಹರಾಜು ಪ್ರಕ್ರಿಯೆ ನಡೆಸುತ್ತಿರಿ ಎಂದು ಪ್ರಶ್ನಿಸಿದರು.?

ದೇಶದ ಕಾನೂನು, ಹೈಕೋರ್ಟ್ ಆದೇಶಕ್ಕೆ ಮನ್ನಣಿ ನೀಡದವರಿಗೆ ಮುಜರಾಯಿ ಇಲಾಖೆ ಆದೇಶವಿದ್ದರೆ ಕಟ್ಟುನಿಟ್ಟಾಗಿ ಬೇರೆ ಸಮುದಾಯದವರಿಗೆ ನೀಡದೇ ಹಿಂದುಗಳಿಗೆ ಮಾತ್ರ ನೀಡಬೇಕು ಎಂದು ಒತ್ತಾಯಿಸಿದರು.

ಅಂತಿಮವಾಗಿ ಜಿಲ್ಲಾಡಳಿತ ಹಾಗೂ ಸಂಭಂದಿಸಿದ ಇಲಾಖೆಯಿಂದ ಈ ಬಗ್ಗೆ ಮಾಹಿತಿ ಪಡೆದು ಒಂದೆರಡು ದಿನದಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸದಸ್ಯರು ಸಲಹೆ ನೀಡಿದರು.ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಮುಖ್ಯಾಧಿಕಾರಿ ಪ್ರವೀಣಕುಮಾರ್, ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು,

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version