Focus News
Trending

ದ್ವಾರಕಾ ಸಹಕಾರಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ

ಅಂಕೋಲಾ:-ಸರ್ಕಾರ ಮತ್ತು ಸಹಕಾರಿ ಇಲಾಖೆಯ ನಿರ್ದೇಶನದಂತೆ ಹಲವು ಸಹಕಾರಿ ಬ್ಯಾಂಕ್‍ಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಗೌರವ ಧನದ ಚೆಕ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ದಿ| ಆರ್.ಎನ್.ನಾಯಕ ರವರು ಕಟ್ಟಿ ಬೆಳೆಸಿದ ದ್ವಾರಕಾ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ಅಂಕೋಲಾವು ಜಿಲ್ಲೆಯ ಸಹಕಾರಿ ರಂಗದಲ್ಲಿ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು ಹಲವು ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಮತ್ತಿತ್ತರ ವಿದಾಯಕ ಕಾರ್ಯಗಳಿಗೆ ನೆರವು ನೀಡುತ್ತಾ ಬಂದಿದೆ.
ಬುಧವಾರ 6 ಆಶಾ ಕಾರ್ಯಕರ್ತೆಯರಿಗೆ ತಲಾ 3,000ರೂಪಾಯಿಗಳಂತೆ ಒಟ್ಟು 18,000 ರೂ.ಗಳ ಚೆಕ್ ಅನ್ನು ಸಹಕಾರಿಯ ಅಧ್ಯಕ್ಷ ಮಯೂರ ಆರ್ ನಾಯಕ ವಿತರಿಸಿದರು‌.

ತಾಲೂಕಿನ ಕೊರೊನಾ ವಾರಿಯರ್ಸ್ ಆಗಿ ವಿಶೇಷ ಸೇವೆ ಸಲ್ಲಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರ ಸೇವೆ ಹಾಗೂ ಶ್ರಮವನ್ನು ಮೆಚ್ಚಬೇಕಿದೆ. ಮುಂದಿನ ದಿನಗಳಲ್ಲಿಯೂ ತಮ್ಮ ವೈಯಕ್ತಿಕ ಕಾಳಜಿಯೊಂದಿಗೆ ಸಮುದಾಯದ ಆರೋಗ್ಯ ಕಳಕಳಿಗೆ ಇನ್ನಷ್ಟು ಸೇವೆ ನೀಡುವಂತಾಗಲಿ.
ಮಯೂರ್ ಆರ್ ನಾಯಕ, ಅಧ್ಯಕ್ಷರು,‌ದ್ವಾರಕಾ‌ ಸಹಕಾರಿ

ಈ ಸಂದರ್ಭದಲ್ಲಿ ಮಯೂರ ನಾಯಕ ಅವರ ಧರ್ಮ ಪತ್ನಿ, ಡಾ ಕಮಲಾ ಮತ್ತು ಆರ್.ಎನ್.ನಾಯಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶ್ರುತಿ ನಾಯಕ, ಬ್ಯಾಂಕ್ ಸಿಬ್ಬಂದಿ ವಿಕಾಸ ನಾಯಕ ಬೋಳೆ, ಪ್ರಮುಖರಾದ ರವಿ ನಾಯ್ಕ ಮತ್ತಿತ್ತರರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರಾದ ತಾರಾ ಗೌಡ, ದೀಪಾ ಶೆಡಗೇರಿ, ಜುಲೇಖಾ ಅಹಮ್ಮದ್. ಭಾರತಿ ಆಗೇರ್, ಕಾವ್ಯ ನಾಯ್ಕ, ಪ್ರೀತಿ ಬಂಟ್ ಗೌರವ ಧನದ ಚೆಕ್ ಸ್ವೀಕರಿಸಿದರು.

ವಿಸ್ಮಯ ನ್ಯೂಸ್-ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button