ಹೊನ್ನಾವರದ ಹೋಲಿ ರೋಸರಿ ಶಾಲೆಯಲ್ಲಿ ನಡೆಯಿತು ಪೋಷಣ ಶಕ್ತಿ ಅಭಿಯಾನದ ಸಾಮಾಜಿಕ ಪರಿಶೋಧನೆ

ಹೊನ್ನಾವರ- ಅಕ್ಷರ ದಾಸೋಹ ಯೋಜನೆಯಿಂದ
ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ಗಣನೀಯ ಹೆಚ್ವಳ ಸಾಧ್ಯವಾಗಿದೆ ಹಾಗೂ ಮಧ್ಯೆ ಮಧ್ಯೆ ಶಾಲೆಯನ್ನು ತೊರೆಯುವಂತ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಭಟ್ಕಳ ತಾಲೂಕು ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ನುಡಿದರು.

ಅವರು ಇತ್ತೀಚೆಗೆ ಹೊನ್ನಾವರ ತಾಲೂಕಿನ ಹೋಲಿ ರೋಸರಿ ಹಿ.ಪ್ರಾ.ಶಾಲೆ ಯಲ್ಲಿ ಪೋಷಣ ಶಕ್ತಿ ಅಭಿಯಾನ ಸಾಮಾಜಿಕ ಪರಿಶೋಧನೆಯ ಪಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಂತರ ಅವರ ನೂರಾರು ಪಾಲಕರ ಜೊತೆ ಮಧ್ಯಾಹ್ನ ದ ಬಿಸಿ ಊಟ ಹಾಗೂ ಕ್ಷೀರ ಭಾಗ್ಯ ಯೋಜನೆಯಲ್ಲಿ ತಮ್ಮ ಮಕ್ಕಳಿಗೆ ಆದ ಅನುಕೂಲಗಳು ಹಾಗೂ ಅನಾನುಕೂಲಗಳ ಇದ್ದಲ್ಲಿ ಈ ಬಗ್ಗೆ ಮುಕ್ತವಾಗಿ ತಿಳಿಸುವಂತೆ ಹಾಗೂ ಬದಲಾವಣೆಗಳು ಸಲಹೆಗಳು ಇದ್ದಲ್ಲಿ ತಿಳಿಸಿವಂತೆ ತಿಳಿಸಿ ಚರ್ಚೆಗೆ ಅವಕಾಶ ನೀಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಸೋಶಿಯಲ್ ಆಡಿಟರ್ ಜಿ.ಐ.ಹೆಗಡೆ ಮಾತನಾಡಿ ಸಾಮಾಜಿಕ ಪರಿಶೋಧನೆ ಯುನಿಟ್ ಇಂದು ಗ್ರಾಮೀಣ ಭಾಗದ ಎಲ್ಲ ಯೋಜನೆಗಳಿಗೂ ವಿಸ್ತರಿಸಿದ್ದು ಯೋಜನೆಗಳಲ್ಲಿ ಒಂದು ಉತ್ತಮ ಫಲಿತಾಂಶ ಮೂಡಲು ಸಾಧ್ಯವಾಗಿದೆ ಎಂದರು. ವೇದಿಕೆಯಲ್ಲಿದ್ದ ಹೊನ್ನಾವರ ಸೋಶಿಯಲ್ ಆಡಿಟರ್ ಚಿದಾನಂದ ಗೌಡ ಅವರು ಸಾಮಾಜಿಕ ಪರಿಶೋಧನೆ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಯಲ್ಲಾಪುರ ಸೋಶಿಯಲ್ ಆಡಿಟರ್ ಗಿರಿಧರ ನಾಯ್ಕ ಪ್ರಾಸ್ಥಾವಿಕವಾಗಿ ಮಾತನಾಡಿದರು.

ಮುಖ್ಯಶಿಕ್ಷಕಿ ರೇಚಲಾ ಮಾತನಾಡಿ ಜಿಲ್ಲೆಯ ಮೂರು ಶಾಲೆಗಳಲ್ಲಿ ಅಕ್ಷರ ದಾಸೋಹ ಸಾಮಾಜಿಕ ಪರಿಶೋಧನೆ ಪ್ರಾಯಗೀಕವಾಗಿ ಮಾಡುತ್ತಿದ್ದು ಸರಕಾರ ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಯೋಜನೆಯಲ್ಲಿ ಸಾಕಷ್ಟು ತಿಳಿಯಲು ನಮಗೆ ಅನುಕೂಲವಾದಂತಾಯಿತು. ಈ ಪರಿಶೋಧನೆ ಆರಂಭವಾದರಿಂದ ಹೊಸ ಹೊಸ ಮಾಹಿತಿಗಳು ದೊರಕಿತು ಎಂದರು.

ಮೊದಲಿಗೆ ಶಾಲೆಯ ದೈಹಿಕ ಶಿಕ್ಷಕ ಲಾರೆನ್ಸ್ ಅವರು ಎಲ್ಲರನ್ನು ಸ್ವಾಗತಿಸಿದರು. ಸಹ ಶಿಕ್ಷಕ ಪೌಲೊ ಪರಿಚಯಿಸಿದರು.ಸಹ ಶಿಕ್ಷಕರಾದ ಶ್ರಿಮತಿ ಮಮತಾ ಅಚಾರ್ಯ ವಂದಿಸಿದರು.

ವೇದಿಕೆಯಲ್ಲಿ ಶಾಲಾ ವ್ಯವಸ್ಥಾಪಕರಾದ ಸಿಸ್ಟರ್ ಇಸಾಬೆಲ್ಲಾ, ಸಿಸ್ಟರ್ ಅನಿತಾ.ರೋಸರಿ ಪ್ರಾ.ಶಾಲೆ ಮುಖ್ಯ ಶಿಕ್ಷಕಿ ಶರಣ್ ಲತಾ.ಸಿಸ್ಟರ್ ರೂಪಾ ಮೊದಲಾದ ಗಣ್ಯರು ಹಾಜರಿದ್ದರು.
ಐದು ದಿನಗಳ ಕಾಲ ನಡೆದ ಪರಿಶೋಧನೆ ಯಲ್ಲಿ ಮೊದಲಿಗೆ ಶಾಲೆಯ ಮುಖ್ಯ ಶಿಕ್ಷಕರು ಸಿಬ್ಬಂದಿಗಳು ಹಾಗೂ ಕೆಲ ಪಾಲಕರ ಜೊತೆ ಪೂರ್ವಭಾವಿ ಸಭೆ ನಡೆಸಿ ಬಿಸಿಊಟ ದಾಖಲೆಗಳು.ಅಡುಗೆ ಕೋಣೆ, ಊಟ ತಯಾರಿಕೆಯಲ್ಲಿ ವಿಧಾನ ಶಿಸ್ತು, ರುಚಿ ಯ ಮಕ್ಕಳ ಪಾಲಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು
ನೂರಾರು ಪಾಲಕರ ಮನೆ ಬೇಟಿ ನಡೆಸಿ ಮಾಹಿತಿಯನ್ನು ಪಡೆಯಲಾಯಿತು.

Exit mobile version