ಸ್ವಸಹಾಯ ಸಂಘ ಎಂದರೆ ಜೇನುಗೂಡು ಇದ್ದಂತೆ – ಉಮೇಶ ಮುಂಡಳ್ಳಿ

ಭಟ್ಕಳ- ಸ್ವಸಹಾಯ ಸಂಘ ಎನ್ನುವುದು ಒಗ್ಗಟ್ಟಿಗೆ ಒಂದು ಮಹೋನ್ನತ ಉದಾಹರಣರಯಾಗಿದ್ದು ಇದೊಂದು ಜೇನುಗೂಡು ಇದ್ದಂತೆ ಅದು ಒಗ್ಗಟ್ಟಿನ ಪ್ರತೀಕವಾಗಿದ್ದು ಆ ಮುಲಕ ಸಿಹಿ ಪಡೆಯಲು ಸಾಧ್ಯ ಎಂದು ತಾಲೂಕು ಪಂಚಾಯತ್ ಸಾಮಾಜಿಕ ಪರಿಶೋಧನಾಧಿಕಾರಿ ಹಾಗೂ ಸಾಹಿತಿಗಳಾದ ಉಮೇಶ ಮುಂಡಳ್ಳಿ ನುಡಿದರು.

ಅವರು ಬುದುವಾರ ಹೆಬಳೆ ಗಣೇಶ ಸಭಾಭವನದಲ್ಲಿ ಕಡಲಮುತ್ತು ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದಿಂದ ನಡೆದ ಹೆಬಳೆ ಪಂಚಾಯತ್ ಮಟ್ಟದ ಅಂತರಾಷ್ಟ್ರೀಯ ಮಹಿಳಾದಿನದ ಕಾರ್ಯಕ್ರಮದಲ್ಲಿ ಉಪನ್ಯಾಶಕರಾಗಿ ಆಗಮಿಸಿ ಮಾತಡಿದರು.

ಅವರು ಮಾತನಾಡುತ್ತಾ ಸ್ವಸಹಾಯ ಸಂಘದ ಉದ್ದೇಶ ಕೇವಲ ಹಣ ಉಳಿತಾಯ ಮಾಡುವಂತದ್ದು ಮಾತ್ರ ಅಗಿರದೆ ಸಮಾಜದ ಅನೇಕ ಸಂಕಷ್ಟಗಳನ್ನು ಸವಾಲಗಳನ್ನು ಎದುರಿಸಲು ಪರಿಹರಿಸಲು ಹುಟ್ಟು ಹಾಕಲಾಗಿದೆ ಎಂದರು. ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಸಂಘದ ಪ್ರತಿ ಮಹಿಳೆಯ ಪಾತ್ರ ಮುಖ್ಯವಾಗಿರುತ್ತದೆ ಎಂದು ಮುಂಡಳ್ಳಿಯವರು ನುಡಿದರು.

ಕಾರ್ಯಕ್ರಮದಲ್ಲಿ ಉದ್ಘಾಟರಾಗಿ ಅಗಮಿಸಿ ಮಾತನಾಡಿದ ಗ್ರಾಮೀಣ ಠಾಣೆಯ ಪಿಎಸ್ ಐ ರತ್ನಾ ಎಸ್ ಕೆ ಮಾತನಾಡಿ ಇಂದು ಮಹಿಳೆ ಎಲ್ಲ ರಂಗದಲ್ಲಿಯೂ ಮುಂದೆ ಇದ್ದಾಳೆ. ಸರ್ಕಾರ ಮಹಿಳೆಯರಿಗಾಗಿ ಅನೇಕ ಅವಕಾಶಗಳನ್ನು ನೀಡಿದೆ ಆದರೆ ಅದರ ಸದುಪಯೋಗ ಪಡೆಯುವಲ್ಲಿ ಮಹಿಳೆಯರು ಇನ್ನೂ ಮುಂದೆ ಬರಬೇಕಿದೆ ಎಂದರು
ಅವಳಿಗೆ ನೀಡಿದ ಸ್ವಾತಂತ್ರ್ಯ ವನ್ನು ಮಹಿಳೆ ಸ್ವೇಚ್ಛೆಯಾಗಿ ಎಂದೂ ದುರುಪಯೋಗ ಪಡಿಸಕೊಳ್ಳಬಾರದು ಎಂಬ ಎಚ್ಚರಿಕೆಯನ್ನು ನೀಡಿದರು.


ಈ ಸಂದರ್ಭದಲ್ಲಿ ಹಾಜರಿದ್ದ ವಲಯ ಮೇಲ್ವಿಚಾರಕರಾದ ಗೋಪಾಲ ನಾಯ್ಕ ಹಾಗೂ ವೆಂಕಟೇಶ ದೇವಾಡಿಗ ಅವರು ಸರ್ಕಾರದ ಸವಲತ್ತುಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಮಮತಾ ಮೊಗೇರ, ಹೇಮಾವತಿ ಮೊಗೇರ, ಮಹಿಳಾ ಕಲ್ಯಾಣ ಇಲಾಖೆಯ ಮೆಲ್ವಿಚಾರಕಿ ಸುರೇಖಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಮೊದಲಿಗೆ ಒಕ್ಕೂಟದ ಪ್ರಬಂದಕಿ ಪದ್ಮಾವತಿ ಮೊಗೆರ ಸ್ವಾಗತಿಸಿ ವರದಿ ವಾಚಿಸಿದರು.ಸುಶೀಲಾ ನಾಯ್ಕ ವಂದಿಸಿದರು.

Exit mobile version