ಹೊನ್ನಾವರ : ತಾಲ್ಲೂಕಿನ ಸಮೀಪ ಸಮುದ್ರದಲ್ಲಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಕಡಲಾಮೆಯೊಂದನ್ನು ಮೀನುಗಾರರು ರಕ್ಷಣೆ ಮಾಡಿದ ಘಟನೆ ನಡೆದಿದೆ. ಹೊನ್ನಾವರ ಮೀನುಗಾರಿಕೆ ಬಂದರಿನಿoದ ಬೋಟೊಂದು ಮೀನುಗಾರಿಕೆಗೆ ತೆರಳಿತ್ತು. ಬೋಟ್ ಸುಮಾರು 40 ಅಡಿ ಆಳದಲ್ಲಿ ಮೀನಿಗಾಗಿ ಹುಡುಕಾಟ ನಡೆಸಿದ್ದ ಸಂದರ್ಭದಲ್ಲಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಡಲಾಮೆಯೊಂದು ಗೋಚರಿಸಿದೆ.
ಕೂಡಲೇ ಕಡಲಾಮೆ ಇದ್ದ ಜಾಗಕ್ಕೆ ಬೋಟ್ ತೆರಳಿತು. ಕಡಲಾಮೆ ಅಪಾಯದಲ್ಲಿರುವುದನ್ನು ಅರಿತ ಬೋಟ್‌ನಲ್ಲಿದ್ದ ಮೀನುಗಾರ ರವಿ ಅಂಬಿಗ ಆಳ ಸಮುದ್ರದಲ್ಲಿ ಅಪಾಯ ವನ್ನು ಲೆಕ್ಕಿಸದೇ ಸಮುದ್ರಕ್ಕೆ ಹಾರಿ ಆಮೆಯ ಬಳಿ ತೆರಳಿ ಆಮೆಯನ್ನು ಬಲೆಯ ಗಂಟಿನಿoದ ಬಿಡಿಸಿದ್ದಾರೆ.
ಬಲೆಯಿಂದ ಬಿಡಿಸಿಕೊಳ್ಳುತ್ತಲೇ ಆಮೆ ಹೋದ ಜೀವ ಮರಳಿತು ಎನ್ನುವಂತೆ ಮತ್ತೆ ಕಡಲಗರ್ಭ ಸೇರಿಕೊಂಡಿತು. ವಿಷ್ಣುವಿನ ದಶಾವತರಾಗಳಲ್ಲಿ ಕೂರ್ಮಾವತಾರವು ಒಂದು. ಹಾಗಾಗಿ ಆಮೆಗಳ ಬಗ್ಗೆ ಹಿಂದೂಗಳಲ್ಲಿ ಪೂಜ್ಯನೀಯ ಭಾವನೆ ಇದೆ.
ವಿಸ್ಮಯ ನ್ಯೂಸ್, ಹೊನ್ನಾವರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.