ಏಪ್ರಿಲ್ 7 ರಂದು ಅಂತ್ರವಳ್ಳಿ ಹುಲಿದೇವರ ಜಾತ್ರೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಂತ್ರವಳ್ಳಿ ಗ್ರಾಮದಲ್ಲಿ ರಾರಾಜಿಸುತ್ತಿರುವ ಗ್ರಾಮ ದೇವತೆಯಾದ ಶ್ರೀ ದುರ್ಗಾಂಬಾ ದೇವಸ್ಥಾನ, ಬಹು ಪುರಾತನ ಕಾಲದಿಂದಲೂ ಪ್ರಸಿದ್ಧ ಜಾಗೃತ ಸ್ಥಾನವಾಗಿದೆ. ಜಗನ್ಮಾತೆ ಶ್ರೀ ದುರ್ಗಾಂಬದೇವಿ ತನ್ನೆಲ್ಲ ಪರಿವಾರ ದೇವತೆಗಳೊಂದಿಗೆ ತನ್ನ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸುತ್ತಿದ್ದು, ಇಲ್ಲೆ ಪಕ್ಕದಲ್ಲೇ ಹುಲಿದೇವರ ದೇವಸ್ಥಾನವಿದೆ. ಪ್ರತಿ ವರ್ಷ ಇಲ್ಲಿ ದೇವರ ಜಾತ್ರೆ ಅತ್ಯಂತ ವಿಜೃಂಭಣೆಯಿoದ ನಡೆಯುತ್ತಿದೆ. ಈ ವರ್ಷ ಇದೇ ಏಪ್ರಿಲ್ 7ರ ಗುರುವಾರ ರಂದು ಜಾತ್ರೆ ಧಾರ್ಮಿಕ ವಿಧಿವಿಧಾನದಂತೆ ನಡೆಯಲಿದೆ.

ಆದರೆ, ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ, ಧಾರ್ಮಿಕ ವಿಧಿ ವಿಧಾನದಂತೆ ಜಾತ್ರೆಯನ್ನು ಆಚರಿಸಲಾಗಿತ್ತು. ಭಕ್ತರ ಸೇವೆಗಳಿಗೆ ಅವಕಾಶ ಇರಲಿಲ್ಲ. ಆದರೆ, ಈ ಬಾರಿ ವಿಜೃಂಭಣೆಯಿoದ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಸೇವೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version