ಕುಮಟಾ: ಕಾಲು ಜಾರಿ ಬಿದ್ದು ಮೃತಪಟ್ಟ ಬಾಲಕಿ ಸಾವಿನ ರಹಸ್ಯವನ್ನು ಪೊಲೀಸರು ಬೇಧಿಸಿದ್ದು, ಇದು ಸಹಜ ಸಾವಲ್ಲ, ಕೊಲೆ ಎಂಬುದು ದೃಢಪಟ್ಟಿದೆ. ಹೌದು, ಇತ್ತಿಚೆಗೆ ತಾಲೂಕಿನ ಮೂರೂರಿನ ಕಲ್ಲಬ್ಬೆಯಲ್ಲಿ ತೋಟಕ್ಕೆ ನೀರು ಹಾಯಿಸಲು ಹೋದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಬಾಲಕಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿತ್ತು. ಆದರೆ, ಸಾವಿನ ಹಿಂದೆ ಹಲವು ಅನುಮಾನ ಕಾಡಿತ್ತು. ಗ್ರಾಮಸ್ಥರು ಇದು ಸಹಜ ಸಾವಲ್ಲ, ಕೊಲೆ ಎಂದು ಶಂಕಿಸಿದ್ದರು. ತನಿಖೆಗಳಿದ ಖಾಕಿ ಪಡೆ, ಈ ಸಾವಿನ ರಹಸ್ಯವನ್ನು ಬಿಚ್ಚಿಟ್ಟಿದೆ.
ಕುಮಟಾ ಪೊಲೀಸರು ಮೃತ ಬಾಲಕಿಯ ಚಿಕ್ಕಮ್ಮನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೂರೂರು ಕಲ್ಲಬ್ಬೆಯ ಹೊಸಳ್ಳಿ ನಿವಾಸಿ ಲಕ್ಷ್ಮೀ ಗೌಡ (39) ಬಂಧಿತ ಮಹಿಳೆ. ಮೃತಳಾದ ಇಂದಿರಾ ಗೌಡ ಎಂಬ ಬಾಲಕಿ ಮತ್ತು ಚಿಕ್ಕಮ್ಮನ ನಡುವೆ ತೋಟದಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಈ ಸಂಬoಧ ಏ.7 ರಂದು ಜಗಳ ನಡೆದಾದ ಆರೋಪಿತೆ ಚಿಕ್ಕಮ್ಮ ಈ ಬಾಲಕಿಯ ಕೆನ್ನೆಗೆ ಹೊಡೆದಾಗ, ಬಾಲಕಿ ಇಂದಿರಾ ಆಯತಪ್ಪಿ ಬಿದ್ದಿದ್ದಾಳೆ.
ಗಾಬರಿಗೊಂಡ ಆರೋಪಿ ಚಿಕ್ಕಮ್ಮ ತಕ್ಷಣ ಆಕೆಯನ್ನು ಸಮೀಪದ ಹಳ್ಳಕ್ಕೆ ಎಸೆದು ಪಲಾಯನ ಮಾಡಿದ್ದಾಳೆ. ಬಾಲಕಿ ಕಾಲು ಜಾರಿ ಹಳ್ಳಕ್ಕೆ ಬಿದ್ದು, ಮೃತಪಟ್ಟಿರಬಹುದೆಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದರು. ಅಂತೆಯೇ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ ಆರೋಪಿ ಚಿಕ್ಕಮ್ಮನ ನಡೆ ಸ್ಥಳೀಯರಿಗೆ ಅನುಮಾನ ಮೂಡಿಸಿದೆ. ಇದು ಸಹಜ ಸಾವಲ್ಲ. ಕೊಲೆ ಎಂಬ ಗುಸು ಗುಸು ಸುದ್ದಿ ಎಲ್ಲೆಡೆ ಹರಡಿತ್ತು.
ಬಳಿಕ ಬಾಲಕಿ ತಾಯಿ ನನ್ನ ಮಗಳನ್ನು ಯಾರೋ ಹಳ್ಳದಲ್ಲಿ ಮುಳುಗಿಸಿ ಸಾಯಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ ತನಿಖೆ ಕೈಗೊಂಡ ಕುಮಟಾ ಪೊಲೀಸರು ಮೃತಳ ಚಿಕ್ಕಮ್ಮನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆಹಾಜರುಪಡಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ