ಕಿರಾಣಿ ಅಂಗಡಿಯೊಂದರಲ್ಲಿ ಸರಾಯಿ ಮಾರಾಟ: ತಾಯಿ ವಶಕ್ಕೆ: ಮಗನ ಬಂಧಿಸಿದ ಪೊಲೀಸರು

ಜಾಮೀನಿನ ಮೇಲೆ ತಾಯಿಯ ಬಿಡುಗಡೆ: ಮಗನಿಗೆ ನ್ಯಾಯಾಂಗ ಬಂಧನ

ಅಂಕೋಲಾ: ಅಕ್ರಮ ಸರಾಯಿ ಮಾರಾಟಕ್ಕೆ  ಸಂಬಂಧಿಸಿದಂತೆ ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದ ಪೋಲೀಸ ತಂಡ ಎರಡು ಕಡೆ ದಾಳಿ ನಡೆಸಿ ಪ್ರತ್ಯೇಕ – ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.  

ತಾಲೂಕಿನ ಬಾಳೇಗುಳಿ ಕೃಷ್ಣಾಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಟೇಲ್ ಸಮೃದ್ಧಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅನಧಿಕೃತವಾಗಿ ಹೋಟೇಲನ ಹಿಂಬದಿಯ ಕಟ್ಟೆಯ ಮೇಲೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅವಕಾಶ ಮಾಡಿ ಕೊಟ್ಟದ್ದಲ್ಲದೇ, ಪೋಲೀಸ್ ದಾಳಿಯ ವೇಳೆ  ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ  ದಾಳಿಯ ಮಧ್ಯ ಮಾರಾಟಕ್ಕೆ ಸಂಬಂಧಿಸಿದ  ಆರೋಪದ ಮೇಲೆ ಹೊಟೇಲ್ ಮಾಲಿಕ ಬೇಳಾ ಬಂದರ್ ನಿವಾಸಿ ಅವಿನಾಶ ಗುರು ನಾಯ್ಕ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು, ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.  

ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ ಸುಂಕಸಾಳ ಬಸ್ ನಿಲ್ದಾಣದ ಬಳಿಯ ಕಿರಾಣಿ ಅಂಗಡಿಯೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೇ ಸರಾಯಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ತಾಯಿ  ಮತ್ತು ಆಕೆಯ ಮಗನನ್ನು  ವಶಕ್ಕೆ ಪಡೆದು, ಅವರ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟಕ್ಕೆ ಇಟ್ಟಿದ್ದ ವಿವಿಧ ಬ್ರ್ಯಾಂಡ್‌ಗಳ ಸಾವಿರಾರು ರೂಪಾಯಿ ಮೌಲ್ಯದ ಸರಾಯಿ ವಶಕ್ಕೆ ಪಡೆದು,ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದು, ಮಹಿಳೆಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೆ,ಅವಳ ಮಗನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗ್ರಾಪಂ ಸದಸ್ಯೆ ಓರ್ವಳೂ ಆರೋಪಿಯಾಗಿರುವ ಈ ಪ್ರಕರಣದಲ್ಲಿ ಆಕೆಯ ಮಗ ನಾಸಿರುದ್ದೀನ್ ರಾಜಾಸಾಬ್ ಸೈಯದ್ (30) ಮೊದಲ ಆರೋಪಿಯಾಗಿದ್ದು ಗ್ರಾಮಸ್ಥರಲ್ಲಿ ಹಲವು ಚರ್ಚೆಗೆ ಕಾರಣವಾದಂತಿದೆ.ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಉಪ ನಿರೀಕ್ಷಕ ಪ್ರವಿಣಕುಮಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version