ಭಟ್ಕಳ: ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ನಾಮಧಾರಿ ಸಮಾಜದ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿರುವುದನ್ನು ಸಾರದಹೊಳೆ ಹನುಮಂತ ದೇವಸ್ಥಾನದ ಆಡಳಿತ ಕಮಿಟಿ ಬಲವಾಗಿ ಖಂಡಿಸಿದೆ ಎಂದು ದೇವಸ್ಥಾನದ ಮಂಡಳಿ ಪ್ರಮುಖ ಹಾಗು ಮಾವಳ್ಳಿ ನಾಮಧಾರಿ ಕೂಟದ ಅಧ್ಯಕ್ಷ ಸುಬ್ರಾಯ ಎಮ್.ನಾಯ್ಕ ಹೇಳಿದರು. ಅವರು ತಾಲೂಕಿನ ಸಾರದಹೊಳೆಯ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
‘ನಾಮಧಾರಿ ಸಮಾಜದ ಕುಲಗುರುಗಳು ಹಾಗೂ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮೇಲೆ ಸಾರದಹೊಳೆ ಶ್ರೀ ಹನುಮಂತ ದೇವರ ಅಷ್ಟಬಂಧ ಪುನರ್ ಪ್ರತಿಷ್ಠಾ ಕಾರ್ಯಕ್ರಮ ನಂತರ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶವನ್ನು ಹಾಕಿರುವುದು ಸಮಾಜಕ್ಕೆ ಬೇಸರವಾಗಿದೆ. ದೇವಸ್ಥಾನದ ಕಾರ್ಯಕ್ರಮದ ಹಿನ್ನೆಲೆ ಸ್ವಾಮೀಜಿಗಳ ಉಪಸ್ಥಿತಿಯ ಬಗ್ಗೆ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೆ ಸ್ವಾಮೀಜಿಯವರು 7 ದಿನವು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವದಿಸಿದ್ದರು.
ಅದೇ ರೀತಿ ಶ್ರೀ ಹಳೇಕೋಟೆ ಹನುಮಂತ ದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮವೂ ಸಹ ವಿಜೃಂಭಣೆಯಿoದ ನೆರವೇರಿತ್ತು. ಆ ಸಂದರ್ಬದಲ್ಲಿ ನಾಮಧಾರಿ ಸಮಾಜದ ಕುಲಗುರುಗಳ ವಿರುದ್ದ ಕೆಲ ಕಿಡಿಗೇಡಿಗಳು ಇಲ್ಲಸಲ್ಲದ ಆರೋಪ ಮಾಡಿದ್ದು, ತನಗೆ ದಿನವೊಂದಕ್ಕೆ ಇಂತಿಷ್ಟು ಹಣ, ಅಲ್ಲಿನ ವಸ್ತುಗಳನ್ನು ನೀಡಬೇಕು ಎಂದು ಗುರುಗಳು ಸೂಚಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದರು.
ವಾಸ್ತವದಲ್ಲಿ ಸ್ವಾಮೀಜಿಗಳು ಇತರಹದ ಯಾವುದೇ ಬೇಡಿಕೆ ನಮ್ಮ ಬಳಿ ಇಡಲಿಲ್ಲ. ಬದಲಾಗಿ ಇಷ್ಟೊಂದು ದೊಡ್ಡ ದೇವಸ್ಥಾನವನ್ನು ಕಟ್ಟಿಸಿದ್ದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಒಂದು ವಾರ ಇಲ್ಲಿಯೆ ವಾಸ್ತವ್ಯ ಹೂಡಲು ಅನುಮತಿ ನೀಡಿದ್ದರು.
ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕ್ರಮಗಳು ಅತಿ ವಿಜೃಂಬಣೆಯಿoದ ನೆರವೇರಿದ್ದು ಪ್ರತಿದಿನ ಲಕ್ಷಾಂತರ ಜನರು ಅನ್ನಸಂತರ್ಪಣೆಯಲ್ಲೂ ಭಾಗಿಯಾಗಿದ್ದರು. ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಎಲ್ಲಿಯೂ ಚ್ಯುತಿ ಬರದಂತೆ ಇಷ್ಟೊಂದು ದೊಡ್ಡ ಕಾರ್ಯಕ್ರಮ ಯಶಸ್ವಿಯಾಗಿರುವದು ಕೆಲವು ಕೀಡಿಗೇಡಿಗಳಿಗೆ ಸಹಿಸಲು ಕಷ್ಟವಾಗಿದೆ. ಇದರಿಂದಲೆ ಇಲ್ಲಸಲ್ಲದ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿವೆ. ಇದನ್ನು ನಾಮಧಾರಿ ಸಮಾಜ ಬಲವಾಗಿ ಖಂಡಿಸುತ್ತಿದೆ. ಗುರುಗಳ ವಿರುದ್ದ ಅವಹೇಳನ ಮುಂದುವರೆದಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ಅಂತಹವರ ವಿರುದ್ದ ಎಲ್ಲಾ ನಾಮಧಾರಿ ಒಗ್ಗೂಡಿಕೊಂಡು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಸಿದರು.
ಈ ಸಂದರ್ಬದಲ್ಲಿ ಆಡಳಿತ ಮೋಕ್ತೇಶರ ಸುಬ್ರಾಯ ಜೆ. ನಾಯ್ಕ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಾ ನಾಯ್ಕ, ಜಟ್ಟಾ ನಾಯ್ಕ, ರಾಜು ನಾಯ್ಕ, ಮಂಜುನಾಥ ನಾಯ್ಕ, ಮೋಹನ ನಾಯ್ಕ, ಚಂದ್ರಕಾAತ ಎನ್ ನಾಯ್ಕ ಸೇರಿ ಇತರರು ಇದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ