ಮನೆಯ ಹಂಚು ಕಿತ್ತು ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾದ ಖದೀಮರು

ಭಟ್ಕಳ : ಮನೆಯ ಹಿಂಬದಿಯ ಮೇಲ್ಚಾವಣಿಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪಾರಾರಿಯಾದ ಘಟನೆ ತಾಲೂಕಿನ ಕಾಯ್ಕಿಣಿ ಮಠದಹಿತ್ಲುವಿನಲ್ಲಿ ನಡೆದಿದೆ. ಶ್ರೀಮತಿ ದುರ್ಗಮ್ಮ ಜಟ್ಟಾ ಮೊಗೇರ ಎನ್ನುವವರ ಮನೆ ಕಳ್ಳತನವಾಗಿದ್ದು, ಮನೆ ಹಿಂಬದಿಯ ಮೇಲ್ಚಾವಣಿಯ ಹಂಚು ಕಿತ್ತು ಕೋಣೆಯ ಒಳನುಗ್ಗಿದ ಕಳ್ಳರು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟಿದ್ದ ಗೋದ್ರೆಜ್ ಕಪಾಟನ ಚಾವಿ ಉಪಯೋಗಿಸಿ 2 ಲಕ್ಷ್ಮೀ ಸರ, 4 ಉಂಗುರ,1 ಚೈನ್,25000 ನಗದು ಹಣ, 2 ಪಾನ್ ಕಾರ್ಡ್,2 ಆಧಾರ್ ಕಾರ್ಡ್, 3 ಎಟಿಎಮ್ ಕಾರ್ಡ್, ಚಾಲನಾ ಪ್ರಮಾಣ ಪತ್ರ,ಮತ್ತು ಬೈಕ್ ದಾಖಲಾತಿಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ಮುಡೇಶ್ವರ ಠಾಣೆಯಲ್ಲಿ ದುರ್ಗಮ್ಮ ಜಟ್ಟಾ ಮೊಗೇರ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಮುರ್ಡೇಶ್ವರ ಠಾಣೆಯ ಪಿಎಸೈ ದೇವರಾಜ್ ಎಸ್ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಕಾರವಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version