ಅಪಾಯಕಾರಿಯಾಗಿದ್ದ ಮಂಗನನ್ನು ಹಿಡಿದು ಕಾಡಿಗೆ ಸಾಗಣೆ: ನಿಟ್ಟುಸಿರು ಬಿಟ್ಟ ಸಾರ್ವಜನಿಕರು

ವೃದ್ಧೆ, ಎಂಜಿನಿಯರ್ ಸೇರಿ ಹಲವರಿಗೆ ಘಾಸಿಗೊಳಿಸಿದ್ದ ಕೋತಿ

ಅಂಕೋಲಾ: ಕಳೆದ ಕೆಲ ದಿನಗಳಿಂದ ಬೊಬ್ರುವಾಡಾ ಗ್ರಾಪಂ ವ್ಯಾಪ್ತಿಯಲ್ಲಿ ಉಪಟಳ ನೀಡಿ, ನಾಗರಿಕರ ನೆಮ್ಮದಿ ಕೆಡಿಸಿದ್ದ ಒಂಟಿ ಮಂಗವನ್ನು,ಸತತ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ತಂಡ,ಸ್ಥಳೀಯರ ಸಹಕಾರ ದಲ್ಲಿ ಸೆರೆ ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸಾಗಿಸಿದೆ. ಏಪ್ರಿಲ್ 28ರ ಬೆಳಿಗ್ಗೆ ಸ್ಥಳೀಯ ಇಂಜಿನಿಯರ್ ಒಬ್ಬರಿಗೂ ಮಂಗ ಘಾಸಿಗೊಳಿಸಿತ್ತು. ಮಂಗನ ಸೆರೆಗೆ ವಿಶೇಷ ಕಾರ್ಯಾಚರಣೆ ಮುಂದುವರಿಸಿದ್ದ ಅರಣ್ಯ ಇಲಾಖೆ ತಂಡ, ಅರವಳಿಕೆ ಇಂಜೆಕ್ಷನ್ ಹಾರಿಸಿ,ಮಂಗನಿಗೆ ಮತ್ತು ಬರುವಂತೆ ಮಾಡಿ ಸೆರೆ ಹಿಡಿದಿದ್ದು, ನಂತರ ಕದ್ರಾ ಬಳಿಯ ವನ್ಯ ಪ್ರದೇಶಕ್ಕೆ ಸಾಗಿಸಿದ್ದಾರೆ ಎನ್ನಲಾಗಿದೆ.

ವೃದ್ಧೆಗೆ ಕಚ್ಚಿ ಗಾಯಗೊಳಿಸಿದ್ದ ಕೋತಿ

ಈ ಮೂಲಕ ಮಂಗನ ಹುಚ್ಚಾಟದಿಂದ ನೊಂದು – ಬೇಸತ್ತ ಸ್ಥಳೀಯರ ಆತಂಕ ದೂರ ವಾದಂತಿದೆ. ತಮ್ಮಿಂದ ಕೊಂಚ ವಿಳಂಬವಾದರೂ, ಕಾರ್ಯಾಚರಣೆ ಯಶಸ್ಸಿಗೆ ಸಹಕರಿಸಿದ ಸ್ಥಳೀಯರು ಮತ್ತು ಡೇರಿಂಗ್ ಟೀಮ್ ಸದಸ್ಯರು, ಹಾಗೂ ಸಿಬ್ಬಂದಿಗಳಿಗೆ ,ಹಾಗೂ ಮಾರ್ಗದರ್ಶನ ನೀಡಿದ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪ್ರತ್ಯಕ್ಷ -ಅಪ್ರತ್ಯಕ್ಷ ಸಹಕರಿಸಿದ ಸರ್ವರಿಗೂ ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ, ಅರಣ್ಯ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version