ಮೇ 4 ಮತ್ತು 5ರಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಜಿಲ್ಲಾ ಪ್ರವಾಸ| ಮುಂಡಗೋಡ, ಶಿರಸಿ, ಸಿದ್ದಾಪುರ, ಹೊನ್ನಾವರ, ಕುಮಟಾಗಳಲ್ಲಿ ವಿವಿಧ ಕಾರ್ಯಕ್ರಮ| ಅಂಕೋಲಾ ನೂತನ ಬಸ್ ನಿಲ್ದಾಣಕ್ಕೂ ಉದ್ಘಾಟನಾ ಭಾಗ್ಯ ?

ಅಂಕೋಲಾ: ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ಶ್ರೀ ರಾಮುಲು ಅವರು ಮೇ 4 ಮತ್ತು ಮೇ 5 ರಂದು ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೇ 4 ರಂದು ಗದಗ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಕ್ಕೆ ಆಗಮಿಸಲಿರುವ ಸಾರಿಗೆ ಸಚಿವರು ಬೆಳಿಗ್ಗೆ 11 ಗಂಟೆಗೆ ಮುಂಡಗೋಡ ನೂತನ ಬಸ್ ನಿಲ್ದಾಣದ ಉದ್ಘಾಟನೆ ಮತ್ತು ನೂತನ ಬಸ್ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಮಧ್ಯಾಹ್ನ 1 ಗಂಟೆಗೆ ಶಿರಸಿ ತಾಲೂಕಿನ ಬಸ್ ಘಟಕದ ಉದ್ಘಾಟನೆ, ಬಸ್ ನಿಲ್ದಾಣದ ಶಂಕು ಸ್ಥಾಪನೆ ನೆರವೇರಿಸಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮದ್ಯಾಹ್ನ 3 ಗಂಟೆಗೆ ಸಿದ್ಧಾಪುರ ತಾಲೂಕಿನ ನೂತನ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಲಿರುವ ಸಚಿವರು ರಾತ್ರಿ ಮುರ್ಡೇಶ್ವರದಲ್ಲಿ ವಾಸ್ತವ್ಯ ಮಾಡಲಿದ್ದು ಮೇ 5 ರಂದು ಬೆಳಿಗ್ಗೆ 11 ಗಂಟೆಗೆ ಹೊನ್ನಾವರದ ನೂತನ ಬಸ್ ನಿಲ್ದಾಣದ ಉದ್ಘಾಟನೆ, ಮದ್ಯಾಹ್ನ 1.30 ಕ್ಕೆ ಕುಮಟಾ ಬಸ್ ಘಟಕದ ಶಂಕುಸ್ಥಾಪನೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಧ್ಯಾಹ್ನ 3.30 ಕ್ಕೆ ಅಂಕೋಲಾ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮ ಮುಗಿದ ನಂತರ 5,30ಕ್ಕೆ
ಅಂಕೋಲಾದಿಂದ ಗೋವಾಕ್ಕೆ (ಪಣಜಿ ) ಹೊರಟು ಅಲ್ಲಿಂದ ವಿಮಾನದ ಮೂಲಕ ಸಚಿವರು ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಹೊರಡಿಸಿದ , ಸಚಿವರ ಪ್ರವಾಸ ಮತ್ತು ಕಾರ್ಯಕ್ರಮ ಪಟ್ಟಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version