ಕಳ್ಳ ಹೆಗ್ಗಣಗಳ ಪಾಲಾಗುತ್ತಿರುವ ರೇಶನ್ ಅಕ್ಕಿ :ನೂರಾರು ಕ್ಲಿಂಟಲದ ರೇಷನ್ ಅಕ್ಕಿ ಜಪ್ತಿ; ಅನ್ನ ಭಾಗ್ಯವೋ ? ಕನ್ನ ಭಾಗ್ಯವೋ ?

ಅಂಕೋಲಾ: ಕೇಣಿ ಪೋಸ್ಟ್ ಆಫೀಸ್ ಎದುರಿನ ಮನೆ ಮತ್ತು ಗೋಡೌನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ ನೂರಾರು ಕ್ಲಿಂಟಾಲ್ ರೇಶನ್ ಅಕ್ಕಿಯನ್ನು ಜಪ್ತು ಪಡಿಸಿಕೊಂಡಿರುವ ಅಧಿಕಾರಿಗಳ ತಂಡ, ತನಿಖೆ ಮುಂದುವರೆಸಿದ್ದಾರೆ.

ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ, ಆಹಾರ ನಿರೀಕ್ಷಕ ಸಂತೋಷ ಯಳಗದ್ದೆ, ಸಿಪಿಐ ಸಂತೋಷ ಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ನೂರಾರು ಕ್ಲಿಂಟಾಲ್ ಅಕ್ಕಿ, ಚೀಲ ಹೋಲಿ ಯುವ ಯಂತ್ರ, ರಿಕ್ಷಾ ವಾಹನ, ಕೆಲ ಪ್ರಮಾಣದ ಗೋಧಿ, ತೂಕದ ಮಷಿನ್ ಜಪ್ತು ಪಡಿಸಿಕೊಂಡಿದ್ದು, ಪಡಿತರ ಅಕ್ಕಿ ಕಳ್ಳ ದಾಸ್ತಾನು – ಮಾರಾಟಕ್ಕೆ ಸಂಬಂಧಿಸಿದಂತೆ,ಸಂಬಂಧಿತ ಇಲಾಖೆಗಳಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಬಡವರ ಪಾಲಿಗೆ ಅನ್ನಭಾಗ್ಯ ವಾಗಬೇಕಿದ್ದ ಅಕ್ಕಿ,ನಾನಾ ಕಾರಣಗಳಿಂದ ಕಳ್ಳ ಸಂತೆ ಕೋರರ ಪಾಲಾಗಿ,ಅಕ್ರಮ ದಂಧೆಕೋರರ ಪಾಲಿಗೆ ( ಕನ್ನ ) ಭಾಗ್ಯವಾದತಿದ್ದು,ರೇಷನ್ ಅಕ್ಕಿಯನ್ನು ಬೇರೆ ಚೀಲಗಳಲ್ಲಿ ತುಂಬಿಸಿ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಬಡವರಿಂದ ಅತಿ ಕಡಿಮೆ ದರದಲ್ಲಿ ರೇಷನ್ ಅಕ್ಕಿ ಸಂಗ್ರಹಿಸುವುದು,ಕೆಲವರಿಗೆ ರೇಷನ್ ಅಕ್ಕಿ ಬದಲಾಗಿ ಕುಚುಲಕ್ಕಿ (ಬೊಯಲ್ಡ್ ರೈಸ್ ) ನೀಡುವುದು ಮತ್ತಿತರ ರೀತಿಯ ಡೀಲ್ ಕುದುರಿಸುತ್ತಿದ್ದರು ಎನ್ನಲಾಗಿದೆ.,

ಸಂಬಂಧಿಸಿದ ಇಲಾಖೆಗಳು ಅಕ್ರಮ ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆ ಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version