ಶಿರಸಿ: ಕಾಲೊಡೆ, ಬಾಯೊಡೆ ತೀವ್ರವಾಗಿ ಹರಡುತ್ತಿರುವ ಕಾರಣ ಬಿಡಾಡಿ ಜಾನುವಾರುಗಳನ್ನು ಹಿಡಿದು ಮಾರಾಟ ಮಾಡಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದಲ್ಲಿ ಇತ್ತೀಚೆಗೆ ಬಿಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿದೆ. ದುರಂತವೆಂದರೆ ಅವುಗಳಿಗೆ ಕಾಲೊಡೆ ಬಾಯೊಡೆ ರೋಗ ಕಂಡುಬಂದಿದೆ ಎಂದರು.
ಈ ಹಿನ್ನೆಲೆಯಲ್ಲಿ ನಗರಸಭೆ ಮೊದಲ ಹಂತದಲ್ಲಿ ಮಾಲೀಕರಿಗೆ ನೋಟೀಸ್ ನೀಡುತ್ತಿದೆ. ಸಂಬಂಧಪಟ್ಟ ಮಾಲಕರು ತಮ್ಮ ಹಸುಗಳನ್ನು ಹೊಡೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ನಗರಸಭೆ ಹಸುಗಳನ್ನು ಹಿಡಿದು ಮಾರಾಟ ಮಾಡಲಿದೆ. ಮಾರಾಟ ಆಗದ ಹಸುಗಳನ್ನ ಗೋಶಾಲೆಗೆ ನೀಡುವುದಾಗಿ ಎಂದು ಹೇಳಿದರು.
ವಿಸ್ಮಯ ನ್ಯೂಸ್ ಶಿರಸಿ