ಮುರುಡೇಶ್ವರನ ದರ್ಶನ ಪಡೆದ ಸಚಿವ ಶ್ರೀ ರಾಮುಲು: ವಿಶೇಷ ಪೂಜೆ

ಭಟ್ಕಳ: ಹೊನ್ನಾವರದ ನೂತನ ಬಸ್ ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ  ಸಚಿವ ಶ್ರೀರಾಮುಲು ಮುರುಡೇಶ್ವರಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು.

ಸಾರಿಗೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀರಾಮುಲು ನಿನ್ನೆ ಶಿರಸಿ ಹಾಗೂ ಸಿದ್ದಾಪುರದ ನೂತನ ಬಸ್ ನಿಲ್ದಾಣದ  ಉದ್ಘಾಟನೆ ನೆರೆವೇರಿಸಿ ಸಂಜೆ ಮುರುಡೇಶ್ವರಕ್ಕೆ ಬಂದು ಇಲ್ಲಿನ ಆರ್.ಎನ್.ಎಸ್.ರೆಸಿಡೆನ್ಸಿ ಹೋಟೆಲನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದು, ಬೆಳಿಗ್ಗೆ ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು. ನಂತರ ದೇವಸ್ಥಾನದ ಆಡಳಿತ ಮಂಡಳಿಯಿಂದ ಸಚಿವರಿಗೆ ಸಾಲು ಹೊದೆಸಿ ಸನ್ಮಾನಿಸಿದರು.

ನಂತರ ಪಿಎಸ್ಐ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದ ಸಚಿವರು ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ನಾವೇ ಪತ್ತೆಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಿ ಪಕ್ಷಪಾತವನ್ನು ಮಾಡದೆ ತನಿಖೆ ನಡೆಸುವಂತೆ ಸೂಚಿಸಿದ್ದೇವೆ.‌ ಬೇರೆ ಯಾವುದೋ ಪಕ್ಷ ನಮಗೆ ಅಕ್ರಮದ ಬಗ್ಗೆ ತಿಳಿಸಿ ನಾವು ಕ್ರಮ ಕೈಗೊಳ್ಳದಿದ್ದರೆ ತಪ್ಪಾಗುತ್ತೆ. ಆದರೆ ನಾವು ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ಗಮನ ಹರಿಸುತ್ತಿದ್ದೇವೆ ಎಂದರು.

ರಾಜ್ಯದ ಹಾಲಿ ಬಿಜೆಪಿ  ಶಾಸಕರಿಗೆ ಬಿಜೆಪಿಯಲ್ಲಿ ಈ ವರ್ಷ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು  ಟಿಕೆಟ್ ವಿಚಾರ ಇನ್ನೂ ನಿರ್ಧಾರವಾಗಿಲ್ಲ ಚುನಾವಣೆಗೆ ಬಹಳಷ್ಟು ಕಾಲ ಇದೆ ಬಿಜೆಪಿ ಪಕ್ಷ ಉತ್ತಮವಾಗಿ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದೆ. ರಾಜ್ಯದ ಎಲ್ಲಾ ಬಿಜೆಪಿಯ ಶಾಸಕರು ಕೂಡಾ ಉತ್ತಮವಾಗಿ ಕಾರ್ಯವನ್ನು ಮಾಡುತ್ತಿದ್ದಾರೆ ಹಾಗಾಗಿ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ ಎಂದರು.

ಬಳಿಕ ಮುರುಡೇಶ್ವರದಿಂದ ಹೊನ್ನಾವ ಬಸ್ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದರು .ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್, ತಹಶೀಲ್ದಾರ್ ಸುಮತ್ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Exit mobile version