Follow Us On

WhatsApp Group
Important
Trending

ಬೈಕನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ದೋಚಿದ ಕಳ್ಳರು

ಬೈಕ್‌ನಲ್ಲಿ ಬಂದ ಅಪರಿಚಿತರ ದುಷ್ಕೃತ್ಯ
ಹೊನ್ನಾವರ ಠಾಣೆಯಲ್ಲಿ ದೂರು ದಾಖಲು

ಹೊನ್ನಾವರ: ಮಾರ್ಕೇಟ್‌ನಿಂದ ಮನೆಗೆ ಬರುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ಮಂಗಳಸೂತ್ರವನ್ನು ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಕಿತ್ತುಕೊಂಡು ಹೋದ ಘಟನೆ ಪಟ್ಟಣದ ಎಮ್ಮೆಪೈಲ್ ಕ್ರಾಸ್ ಬಳಿ ನಡೆದಿದೆ.
ಎಮ್ಮೆಪೈಲ್ ನಿವಾಸಿಯಾಗಿರುವ ಪೂರ್ಣಿಮಾ ನಾಯ್ಕ ಎಂಬ ಮಹಿಳೆ ಮಾರ್ಕೇಟಿಗೆ ಹೋಗಿ ಮನೆಗೆ ಮರಳುತ್ತಿರುವಾಗ ಈ ಘಟನೆ ನಡೆದಿದ್ದು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಕತ್ತಿನಲ್ಲಿದ್ದ 15 ಗ್ರಾಂ ತೂಕದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.


ಹೆಚ್ಚುತ್ತಿರುವ ಕಳ್ಳತನ ಸಾರ್ವಜನಿಕರು ಜಾಗೃತರಾಗಿರುವಂತೆ ಪೊಲೀಸರ ಸೂಚನೆ
ಮಳೆಗಾಲದ ಸಂದರ್ಭದಲ್ಲಿ ಅಂತರಾಜ್ಯ ಹಾಗೂ ಹೊರ ಜಿಲ್ಲೆಯ ಕಳ್ಳರು ಜಿಲ್ಲೆಗೆ ನುಸುಳಿ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುವ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಿದ್ದ ಪೊಲೀಸ್ ಇಲಾಖೆ ಈ ಬಗ್ಗೆ ಜಾಗೃತರಾಗಿರುವಂತೆ ಈ ಮೊದಲೇ ಸೂಚನೆ ನೀಡಿತ್ತು. ಪೊಲೀಸರ ನಿರೀಕ್ಷೆಯಂತೆಯೇ ತಾಲೂಕು ಹಾಗೂ ಜಿಲ್ಲೆಯಲ್ಲಿ ನಿತ್ಯವೂ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದೆ.
ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಹೇರಿದ್ದರಿಂದ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿರುವುದಲ್ಲದೇ ಅನೇಕ ಮಂದಿ ತಮ್ಮ ದುಡಿಮೆಯನ್ನೂ ಕಳೆದುಕೊಂಡಿದ್ದಾರೆ. ದುಶ್ಚಟಗಳಿಗೆ ದಾಸರಾದವರು ಕೆಲಸವಿಲ್ಲದೆ ದುಡಿಮೆಯೂ ಇಲ್ಲದೆ ಕಳ್ಳತನದಂತ ದುಷ್ಕೃತ್ಯಗಳಿಗೆ ಮುಂದಾಗಿರುವ ಸಾಧ್ಯತೆಯೂ ಹೆಚ್ಚಿದೆ. ಸಾರ್ವಜನಿಕರು ತಮ್ಮ ಹಣ ಒಡವೆಗಳ ಬಗ್ಗೆ ಕಾಳಜಿವಹಿಸಬೇಕು, ಅಪರಿಚಿತರ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

[sliders_pack id=”1487″]

Back to top button