ಭಟ್ಕಳ - 9
ಕುಮಟಾ - 3
ಕಾರವಾರ - 2 ಮುಂಡಗೋಡ - 3
ಹಳಿಯಾಳ - 3
ಕಾರವಾರ:ಉತ್ತರಕನ್ನಡದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಭಾನುವಾರ 21 ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಭಟ್ಕಳದಲ್ಲಿ 9 ಪ್ರಕರಣ ದಾಖಲಾಗಿದೆ. ಭಟ್ಕಳ ತಾಲೂಕಿನಲ್ಲಿ ರವಿವಾರದಂದು 9 ಪ್ರಕರಣ ಪತ್ತೆಯಾಗಿದೆ. ಓರ್ವ ಕೇರಳ ರಿಟನ್ ಆಗಿದ್ದು ಇನ್ನು 8 ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿರುವವರಾಗಿದ್ದಾರೆ.
9 ಪ್ರಕರಣಗಳಲ್ಲಿ 7 ಪ್ರಕರಣ ಮೃತ ಸೋಂಕಿತ ಮದುಮಗನ ಪ್ರಾಥಮಿಕ ಸಂಪರ್ಕದಿಂದ ಬಂದವರಾಗಿದ್ದು .ಇನ್ನೊಂದು ಪ್ರಕರಣ ಸೋಂಕಿತೆ ನರ್ಸನ ಪ್ರಾಥಮಿಕ ಸಂಪರ್ಕದಿಂದ ಬಂದವರಾಗಿದ್ದು ಇನ್ನುಳಿದ ಒಂದು ಪ್ರಕರಣ ಕೇರಳದಿಂದ ಬಂದವರಾಗಿದ್ದಾರೆ. ಒಟ್ಟು 9 ಪ್ರಕರಣ ತಾಲೂಕಿನಲ್ಲಿ ಪತ್ತೆಯಾಗಿದೆ
ಮುರುಡೇಶ್ವರದ 26 ವರ್ಷದ ಯುವತಿ ಕೇಳರದಿಂದ ಬಂದವರಾಗಿದ್ದಾರೆ. ಹಾಗೂ 79 ವರ್ಷದ ವೃದ್ಧನಿಗೆ ಸೋಂಕಿತೆ ನರ್ಸ್ ನಿಂದ ಸೋಂಕು ತಗಲಿದ್ದು .ಇನ್ನುಳಿದ 7 ಸೋಂಕಿತರು ಮೃತ ಸೋಂಕಿತ ಮದುಮಗನ ಸಂಬಂಧಿಕರಾದ 13 ವರ್ಷದ ಬಾಲಕ, 21,25,27 ಯುವಕ, 52 ವರ್ಷದ ಪುರುಷ, 19 ಹಾಗೂ 22 ವರ್ಷದ ಯುವತಿ ಎಂದು ತಿಳಿದು ಬಂದಿದ್ದು ಒಟ್ಟು 9 ಪ್ರಕರಣ ತಾಲೂಕಿನಲ್ಲಿ ಪತ್ತೆಯಾಗಿದೆ.
ಬೆಂಗಳೂರಿನಿಂದ ಬಂದ ಕುಮಟಾ ಮಹಿಳೆಯಲ್ಲಿ ಸೋಂಕು?
ಇದೇ ವೇಳೆ, ಕೆಲದಿನಗಳ ಬೆಂಗಳೂರಿನಿಂದ ಬಂದ ಕುಮಟಾದ ಮಹಿಳೆಯಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಅವರ ಗಂಟಲುದ್ರವದ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ಪಾಸಿಟಿವ್ ದೃಢಪಟ್ಟಿದೆ. ಮತ್ತೆರಡು ವರದಿಯಲ್ಲಿ ಗೊಂದಲ ಇದ್ದು, ಹೀಗಾಗಿ ಮರುಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ಇಂದು ಕುಮಟಾ ತಾಲೂಕಿನಲ್ಲಿ ಒಂದೇ ಪ್ರಕರಣ ಅಧಿಕೃತಗೊಂಡಿದೆ ಎನ್ನಲಾಗಿದೆ. ಕಾರವಾರ 2 ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಬಂದಿದೆ.ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‍ಲ್ಲಿ ಮಾಹಿತಿ ಅಧಿಕೃತಗೊಳ್ಳಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.