ಮಾಹಿತಿ
Trending

ಅಂಕೋಲಾದಲ್ಲಿ ಕರೊನಾ ಕುರಿತು ಗಾಳಿಸುದ್ದಿ

ಅಂಕೋಲಾ : ಸಂಡೇ ಲಾಕ್‍ಡೌನ್ ಆದೇಶದಿಂದ ಬಹುತೇಕ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಿತ್ತಲ್ಲದೇ ಸಂಚಾರ ಸ್ತಬ್ಧಗೊಂಡಿತ್ತು. ಮಳೆ ಮತ್ತು ಆತಂಕದ ಕಾರ್ಮೋಡ ಕವಿದಂತಿದ್ದು, ಗ್ರಹಣದ ನಾನಾ ಕಾರಣಗಳಿಂದ ಹಲವು ಜನರು ತಮ್ಮ ತಮ್ಮ ಮನೆ-ಕೇರಿಗಳನ್ನು ಬಿಟ್ಟು ಹೊರಹೋಗದೇ, ಸ್ವಯಂ ಫ್ರೇರಿತರಾಗಿ ಲಾಕ್‍ಡೌನ್ ಆದೇಶಪಾಲಿಸಿದಂತಿತ್ತು.
ಭಾನುವಾರ ಅಂಕೋಲಾದಲ್ಲಿ ಮತ್ತೊಂದು ಕೋವೀಡ್-19 ಹೊಸ ಪ್ರಕರಣ ಪತ್ತೆಯಾಗಿದೆ, ಎನ್ನುವ ಸುದ್ದಿ-ಸಂದೇಶಗಳು ಹರಿದಾಡಿದ್ದವಾದರೂ, ಬೆಂಗಳೂರಿನಲ್ಲಿ ಸೋಂಕು ಧೃಡಪಟ್ಟವರೋರ್ವರು ಅಂಕೋಲಾ ತಾಲೂಕಿನ ಮೂಲದವರಾಗಿರುವುದೇ, ಈ ಸುದ್ದಿ ಹರಡಲು ಕಾರಣ ಎನ್ನಲಾಗಿದೆ.
ಸೋಂಕಿತರು ಹೆಚ್ಚುತ್ತಿರುವಂತೆ ತಾಲೂಕಿನಲ್ಲಿ ಗಂಟಲುದ್ರವ ಪರೀಕ್ಷೆ ಸಂಖ್ಯೆಯೂ ಹೆಚ್ಚುತ್ತಿದ್ದು, ಈ ವರೆಗೆ 765ಕ್ಕೂ ಹೆಚ್ಚು ಗಂಟಲುದ್ರವದ ಪರೀಕ್ಷೆಗೆಕಳುಹಿಸಲಾಗಿದ್ದು, ಸುಮಾರು 150ಕ್ಕೂ ಹೆಚ್ಚು ಪರೀಕ್ಷಾ ವರದಿಗಳು ಬರಬೇಕಿದೆ ಎನ್ನಲಾಗಿದೆ. ಸೋಮವಾರ ಕೆಲ ಗಂಟಲುದ್ರವದ ಪರೀಕ್ಷೆ ವರದಿ ಬರುವ ಸಾಧ್ಯತೆಯಿರುವುದು ಮತ್ತು ರಾಜಧಾನಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಜನರು ತಮ್ಮ ತಮ್ಮ ಊರು ಸೇರಿಕೊಳ್ಳುತ್ತಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Related Articles

Back to top button