ಕಾರವಾರ: ಮದಿರೆ ಮತ್ತಿನಲ್ಲಿದ್ದ ಯುವಕನೋರ್ವ ಯುವತಿಯೊಬ್ಬಳ ತಾಯಿಗೆ ಚೂರಿಯಿಂದ ಇರಿದ ಘಟನೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಒಂದುವರೆ ವರ್ಷದಿಂದ ಮದುವೆಯಾಗದೇ ತನ್ನ ಬಳಿಯೆ ಇಟ್ಟಯಕೊಂಡಿದ್ದ ಪ್ರಿಯಕರ ಪ್ರೇಯಸಿಯ ತಾಯಿಯ ಹೊಟ್ಟೆಗೆ ಚಾಕು ಇರಿದು ಮಾರಣಾಂತಿಕ ಗಾಯ ಮಾಡಿದ್ದಾನೆ.ಕದ್ರಾ ಮೂಲದ ಫಾತಿಮಾ ಸಲೀಂ ಚಾಕು ಇರಿತಕ್ಕೆ ಒಳಗಾದ ಮಹಿಳೆಯಾಗಿದ್ದು, ದಾಂಡೇಲಿ ರಮಜಾನ್ (25) ಚಾಕು ಹಾಕಿದ ಆರೋಪಿ ಎಂದು ತಿಳಿದುಬಂದಿದೆ.
ರoಜಾನ್ ಕಳೆದ ಒಂದು ವರ್ಷದ ಹಿಂದೆ ಫಾತಿಮಾ ಸಲೀಂ ಎಂಬಾಕೆಯ ಮಗಳಾದ ರಿಯಾನಾ ಸಲೀಂ ತಾನೂ ಪ್ರೀತಿಸುತ್ತಿದ್ದೇನೆ ಎಂದು ಎತ್ತಿಕೊಂಡು ಹೋಗಿದ್ದ. ಬಳಿಕ ಆಕೆಯನ್ನು ಮದುವೆಯಾಗದೇ ಹಾಗೆ ಇಟ್ಟುಕೊಂಡಿದ್ದನ್ನಲ್ಲದೆ ಒಂದು ಹೆಣ್ಣು ಮಗುವಿನ ಜನ್ಮಕ್ಕೂ ಕಾರಣವಾಗಿದ್ದ.
ಮಗಳು ಹೆರಿಗೆಯಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವದನ್ನು ಮನಗಂಡು ಫಾತಿಮಾ ಸಲೀಂ ಮಗಳ ಮಗುವನ್ನು ನೋಡಲು ಬಂದಿದ್ದಾಳೆ. ಈ ವೇಳೆ ಆರೋಪಿ ರಮಜಾನ್ ತನ್ನ ಪ್ರೇಯಸಿ ರಿಯಾನಾ ಸಲೀಂ ತಾಯಿ ಬಂದಿರುವದಕ್ಕೆ ಆಕ್ಷೇಪಿಸಿ ರಾದ್ದಾಂತ ಮಾಡಿದ್ದ ಎನ್ನಲಾಗಿದೆ..
ಈ ಹಿನ್ನಲೆಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ತಿಳಿಸಿದ್ದು ಸ್ಥಳಕ್ಕಾಗಮಿಸಿದ್ದ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ತೆರಳಿದ್ದರು. ಈ ಮಧ್ಯೆ ಆಸ್ಪತ್ರೆ ಎಸ್ ಐ ಸಿ ಯು ನಲ್ಲಿ ದಾಖಲಿದ್ದ ಮೊಮ್ಮಗಳ ಆರೈಕೆಯಲ್ಲಿದ್ದ ಯುವತಿಯ ತಾಯಿ ರಮಜಾನ್ ಬಳಿ ಮಗಳ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದು, ಇನ್ನಾದರೂ ಆಕೆಗೆ ಮದುವೆಯಾಗು ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ಸಿಟ್ಟಾದ ಆರೋಪಿ, ಚಾಕುವಿನಿಂದ ಯುವತಿಯ ತಾಯಿಯ ಹೊಟ್ಟೆಗೆ ಚುಚ್ಚಿದ್ದಾನೆ. ಪರಿಣಾಮ ಮಹಿಳೆಯ ಹೊಟ್ಟೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ತುರ್ತು ಚಿಕಿತ್ಸಾ ವಾರ್ಡ್ ಗೆ ಕೊಂಡೊಯ್ದು ಚಿಕಿತ್ಸೆ ನೀಡಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ