18ನೇ ವಯಸ್ಸಿಗೆ ಮತದಾನದ ಹಕ್ಕು ನೀಡಿದ್ದು ಮಾಜಿ ಪ್ರಧಾನಿ ರಾಜೀವಗಾಂಧಿ: ಬೀಮಣ್ಣ ನಾಯ್ಕ

ಹೊನ್ನಾವರ : ದೇಶದ ಶಕ್ತಿ ಯುವಕರು ಎಂದು ನಂಬಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂದಿ ತನ್ನ ಅಧಿಕಾರಾವಧಿಯಲ್ಲಿ ದೇಶದ ಯುವಕರಿಗೆ 18ನೇ ವಯಸ್ಸಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ ಲೋಕಸಭೆಯಲ್ಲಿ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದ್ದರು ಎಂದು ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀಮಣ್ಣ ನಾಯ್ಕಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿಯವರ 31ನೇ ಪುಣ್ಯ ದಿನದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ದೂರದಅಮೇರಿಕಾದಲ್ಲಿಕಾರ್ಯ ನಿರ್ವಹಿಸುತ್ತಿದ್ದ, ಆಧುನಿಕ ತಂತ್ರಜ್ಞಾನದ ಪಿತಾಮಹ ಸ್ಯಾಮ್ ಪಿತ್ರಾಡೊರವರನ್ನು ಭಾರತಕ್ಕೆ ಕರೆತಂದು ಭಾರತದಲ್ಲಿ ಕಂಪ್ಯೂಟರ್‌ಯುಗಕ್ಕೆ ಭದ್ರ ಬುನಾದಿ ಹಾಕಿದ್ದರುಎಂದರು. ಇಂದು ಭಾರತದಲ್ಲಿ ಮೊಬೈಲ್, ಕಂಪ್ಯೂಟರ್ ತಂತ್ರಜ್ಞಾನ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದರೆ ಅದು ದಿ.ರಾಜೀವ್‌ಗಾಂಧಿಯವರ ಶ್ರಮಎಂದು ಹೆಮ್ಮೆ ವ್ಯಕ್ತ ಪಡಿಸಿದರು. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತರಿಗೆ ತಮ್ಮ ಜೀವದ ಕೊನೆಯ ಉಸಿರಿರುವವರೆಗೂ ಧ್ವನಿಯಾಗಿದ್ದರು ಎಂದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಜಗದೀಪ ಎನ್. ತೆಂಗೇರಿ ಮಾತನಾಡಿ ಮಾಜಿ ಪ್ರಧಾನಿ ರಾಜೀವಗಾಂಧಿ ಭವ್ಯ ಭಾರತದ ಕನಸನು ಕಂಡಿದ್ದರು. ತನ್ನ ಅಧಿಕಾg ಅವಧಿಯಲ್ಲಿ ದೇಶದ ಸಮಗ್ರತೆ, ಅಖಂಡತೆಗಾಗಿ ಹಗಲಿರುಳು ಹೋರಾಡಿದ್ದರು. ದೇಶದ ಐಕ್ಯತೆಗಾಗಿ ಶ್ರಮಿಸಿದ ರಾಜೀವಗಾಂಧಿ ಕೊನೆಗೂ ಭಯೋತ್ಪದಕರಅಟ್ಟಹಾಸಕ್ಕೆ ಬಲಿಯಾಗಿದ್ದು ಈ ದೇಶದ ಬಹುದೊಡ್ಡ ದುರಂತ ಎಂದು ಖೇಧ ವ್ಯಕ್ತ ಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ದಿ.ರಾಜೀವ್‌ಗಾಂಧಿ ಭಾವ ಚಿತ್ರಕ್ಕೆ ಸೇರಿದ ಪಕ್ಷದ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ, ಕುಮಟಾ ಪುರಸಭೆ ಸದಸ್ಯ ಎಮ್.ಟಿ. ನಾಯ್ಕ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕಜಾಲ ತಾಣದ ಉಪಾಧ್ಯಕ್ಷ ಪವನ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಪರಿಶಿಷ್ಟ ಜಾತಿ ವಿಭಾಗದ ಕೃಷ್ಣ ಹರಿಜನ, ಹಿಂದುಳಿದ ವರ್ಗ ವಿಭಾಗದಕೆ.ಎಚ್. ಗೌಡ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯಾ ಶೇಖ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಕಾರ್ಯದರ್ಶಿ ಮಹೇಶ ನಾಯ್ಕ, ಸೇವಾದಳದ ಕೃಷ್ಣ ಮಾರಿಮನೆ, ಹಿಂ.ವರ್ಗ ವಿಭಾಗದ ಕಾರ್ಯದರ್ಶಿ ಮಹೇಶ ನಾಯ್ಕ, ಪಕ್ಷದ ಹಿರಿಯ ಮುಖಂಡರಾದ ಬಾಲಚಂದ್ರ ನಾಯ್ಕ, ಮಾದೇವ ನಾಯ್ಕ, ಕರ್ಕಿ, ಹನೀಫ್ ಶೇಖ, ಜೋಸೆಫ್ ಡಾಯಸ್, ಚಂದ್ರಶೇಖರ್ ಚಾರೋಡಿ, ನೆಲ್ಸನ್‌ರೊಡ್ರಗೀಸ್, ಮಾದೇವ ನಾಯ್ಕ, ಮನ್ಸೂರ ಶೇಖ್‌ಇನ್ನೂ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Exit mobile version