S S L C ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮನೆಯಂಗಳದಲ್ಲಿ ಸನ್ಮಾನ

ಶ್ರೀ ಚನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ 2021- 22ನೇ ಶೈಕ್ಷಣಿಕ ವರ್ಷದ S S L C ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮನೆಯಂಗಳದಲ್ಲಿ ಸನ್ಮಾನ ನೀಡಿ ಶುಭ ಹಾರೈಸಲಾಯಿತು.  625ಕ್ಕೆ 615 ಅಂಕವನ್ನು ಪಡೆದು 98.4% ಫಲಿತಾಂಶ ದಾಖಲಿಸಿ ಪ್ರಥಮ ಸ್ಥಾನ ಗಳಿಸಿದ “ಕುಮಾರಿ ಸಂಪದಾ ರಮೇಶ್ ನಾಯ್ಕ್” ಹಾಗೂ 614 ಅಂಕ ಪಡೆದು 98.24% ಫಲಿತಾಂಶ  ಗಳಿಸಿದ “ಕುಮಾರ್ ರೋಹನ್ ಸತೀಶ್ ನಾಯ್ಕ್” ಇವರ ಮನೆಯಂಗಳದಲ್ಲಿ ತಂದೆ-ತಾಯಿ ಹಾಗೂ ಬಂಧುಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.   

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಜಾನನ ಹೆಗಡೆ ಯವರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಎನ್ಎಸ್ ಹೆಗಡೆ ಯವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶ್ರೀ ಶ್ರೀಕಾಂತ್ ಮೊಗೇರ್ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.  ಶಾಲೆಯ ಮುಖ್ಯಾಧ್ಯಾಪಕ ರಾದ ಶ್ರೀ ಎಲ್ ಎಮ್ ಹೆಗಡೆಯವರು  ಹಾಗೂ ಎಲ್ಲ ಶಿಕ್ಷಕ ವೃಂದದವರು ಪಾಲ್ಗೊಂಡು ದಾಖಲೆಯ ಫಲಿತಾಂಶ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭಹಾರೈಸಿದರು

Exit mobile version