ಲಾರಿಯ ಹಿಂಬದಿಯಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿ: ಲಾರಿ ಚಾಲಕ ವಾಹನ ಚಲಾಯಿಸುವಾಗ ಸಿಕ್ಕಿ ಸಾವು

ಹಳಿಯಾಳ: ಟ್ರಕ್ಕೊಂದು ಹಿಂಬದಿಯಿoದ ಚಲಸಿ ಅಪರಿಚಿತ ವ್ಯಕ್ತಿಯ ಮೇಲೆ ಹಾದು ಹೋದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹಳಿಯಾಳ ರಸ್ತೆಯ ಟ್ರಕ್ ಟರ್ಮಿನಲ್ ಬಳಿ ನಡೆದಿದೆ. ದಾಂಡೇಲಿ ಹಳಿಯಾಳ ರಸ್ತೆಯ ಉದ್ದೇಶಿತ ಟ್ರಕ್ ಟರ್ಮಿನಲ್ ಬಳಿಯಲ್ಲಿಯೇ ಈ ದುರಂತ ನಡೆದಿದೆ.

ನಿಲ್ಲಿಸಿಟ್ಟಿದ್ದ ಲಾರಿಯ ಹಿಂದುಗಡೆ ಸುಮಾರು 30-35 ವರ್ಷ ಪ್ರಾಯದ ವ್ಯಕ್ತಿಯೋರ್ವ ನಿದ್ರಿಸುತ್ತಿದ್ದ ಎನ್ನಲಾಗಿದೆ.
ಲಾರಿಯ ಡ್ರೈವರ್ ತನ್ನ ವಾಹನವನ್ನು ಹಿಂಬದಿಯಿoದ ಚಲಾಯಿಸಿದ್ದು ಹಿಂಬದಿ ರಸ್ತೆ ಮೇಲೆ ಮಲಗಿದ್ದ ಅಪರಿಚಿತನ ಮೇಲೆ ಹಾದು ಹೋದ ಪರಿಣಾಮ ತಲೆ ಮತ್ತು ಕೈಗೆ ಭಾಗದಲ್ಲಿ ಗಂಭೀರ ಸ್ವರೂಪದ ಗಾಯವಾಗಿ ರಕ್ತ ಸ್ರಾವವಾಗಿ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬoಧಿಸಿ ಲಾರಿಯ ಚಾಲಕ ತಮಿಳುನಾಡಿನ ಸುಗುಮಾರ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Exit mobile version