ಐಎನ್ಎಸ್ ಖಂಡೇರಿಯಲ್ಲಿ ರಕ್ಷಣಾ ಸಚಿವರ ಸಮುದ್ರಯಾನ: ವಿವಿಧ ಕಾರ್ಯಾಚರಣೆಗಳ ಬಗ್ಗೆ  ಮಾಹಿತಿ

ಕಾರವಾರ: ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿರುವ ಕೇಂದ್ರ ಸಚಿವ ರಾಜನಾಥ ಸಿಂಗ್ ಐಎನ್ಎಸ್ ಖಂಡೇರಿ ಸಬ್ ಮೇರಿಯನ್ ಮೂಲಕ ಶುಕ್ರವಾರ ಸಮುದ್ರಯಾನ ನಡೆಸಿದರು. ಅರಗಾದ ಕದಂಬ ನೌಕಾನೆಲೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಬೆಳಿಗ್ಗೆ ಯೋಗಾಭ್ಯಾಸದ ಬಳಿಕ ಭಾರತೀಯ ತಂತ್ರಜ್ಞಾನದಿಂದ ನಿರ್ಮಾಣವಾದ ಐಎನ್ಎಸ್ ಖಂಡೇರಿ ಸಬ್ ಮೇರಿಯನ್ ಮೂಲಕ ಸಮುದ್ರಯಾನ ಕೈಗೊಂಡಿದ್ದರು. ಸಮುದ್ರ ವಿಹಾರದ ಸಮಯದಲ್ಲಿ ನೀರೊಳಗಿನ ಡೊಮೇನ್‌ನಲ್ಲಿ ನಡೆಸಿದ ವಿವಿಧ ಕಾರ್ಯಾಚರಣೆಗಳ ಬಗ್ಗೆ  ಮಾಹಿತಿ ನೀಡಲಾಯಿತು. 

 

ಮೇಕ್ ಇನ್‌ ಇಂಡಿಯಾ ಉಪಕ್ರಮದ ಅಡಿಯಲ್ಲಿ ಮುಂಬೈನ ಮಜಗಾನ ಡಾಕ್ಸ್ ನಲ್ಲಿ ನಿರ್ಮಿಸಲಾದ ಈ ಸಬ್‌ ಮರಿಯನ್ ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳಲ್ಲಿ ಎರಡನೇಯದಾಗಿದೆ. 2019 ರಲ್ಲಿ ರಕ್ಷಣಾ ಸಚಿವರಿಂದ ಸೇವೆಗೆ ಐಎನ್‌ಎಸ್ ಖಂಡೇರಿ ನಿಯುಕ್ತಿಗೊಂಡಿತ್ತು.

Exit mobile version