ತಂಬಾಕು ಸೇವನೆ ಹೆಚ್ಚಿದಂತೆ ಅನಾರೋಗ್ಯಕರ ಜೀವನವು ಹೆಚ್ಚಾಗುತ್ತಿದೆ – ಡಾ|| ಕಿರಣ ನಾಯ್ಕ : ತಾಲೂಕ ಆಸ್ಪತ್ರೆ ಕುಮಟಾದಲ್ಲಿ “ವಿಶ್ವ ತಂಬಾಕು ರಹಿತ ದಿನ

“ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಂಬಾಕು ಸೇವನೆಯಿಂದ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ತೊಡಕಾಗಿದೆ. ಯುವ ಜನತೆ ತಂಬಾಕು ಸೇವನೆಗೆ ಆಕರ್ಷಿತರಾಗುತ್ತಿರವುದು ಆತಂಕಕಾರಿ ಸಂಗತಿ. ತಂಬಾಕು ಸೇನವೆಯಿಂದ ಸುಮಾರು 5000 ಕ್ಕೂ ಹೆಚ್ಚಿನ ವಿಷಕಾರಕ ರಾಸಾಯನಿಕಗಳು ದೇಹವನ್ನು ಸೇರುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ.ಎಷ್ಷತ್ತಕ್ಕೂ ಹೆಚ್ಚು ಕ್ಯಾನ್ಸರ್ ಕಾರಕ ಅಂಶಗಳು ತಂಬಾಕಿನಲ್ಲಿವೆ.” ಎಂದು ಕಿವಿ ಮತ್ತು ಗಂಟಲು ತಜ್ಞರಾದ ಡಾ|| ಕಿರಣ ನಾಯ್ಕ ಹೇಳಿದರು. ಅವರು ತಾಲೂಕಾ ಆಸ್ಪತ್ರೆ ಕುಮಟಾದಲ್ಲಿ ನಡೆದ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

“ಹತ್ತು ಸಾವುಗಳಲ್ಲಿ ಒಂದು ಸಾವು ತಂಬಾಕು ಸೇವನೆಯಿಂದ ಆಗುತ್ತದೆ. ಶೇಕಡ 20 ರಷ್ಟು ಹೃದಯಘಾತ ಧೂಮಪಾನದಿಂದ ಆಗುತ್ತದೆ. ತಂಬಾಕು ಸೇವನೆಯಿಂದ ಶ್ವಾಸಕೊಶಗಳ ಕಾಯಿಲೆ, ಅಸ್ತಮಾ,ಕ್ಯಾನ್ಸರ್,ಹೃದಯಘಾತ,ಸಕ್ಕರೆ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.ಹೆಚ್ಚಿನ ಪ್ರಮಾಣದಲ್ಲಿ ಕ್ಷಯ ರೋಗಗಳು ಕಾಣಿಸಿಕೊಳ್ಳುತ್ತದೆ.ದೀರ್ಘಕಾಲದಿಂದ ತಂಬಾಕು ಸೇವಿಸುತ್ತಿದ್ದವರಲ್ಲಿ ಮರಣಾಂತಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.ತಂಬಾಕು ಸೇವನೆಯಿಂದ ದೂರವಿರುವದರಿಂದ ಈ ಎಲ್ಲ ತೊಂದರೆಗಳಿoದ ಮುಕ್ತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ತಿ ರೋಗ ತಜ್ಞರಾದ ಡಾ|| ಕೃಷ್ಣಾನಂದರವರು ಮಾತನಾಡುತ್ತ “ಪುರುಷರಲ್ಲಿ ತಂಬಾಕು ಸೇವನೆಯಿಂದ ಸಂತಾನ ಹೀನತೆಗೆ ಕಾರಣವಾಗಬಹುದು.ತಂಬಾಕು ಸೇವಿಸುವ ಸ್ತಿಯರಲ್ಲಿ ಮುಟ್ಟಿನ ಏರುಪೇರುಗಳಾಗುತ್ತದೆ. ಸ್ತನ ಕ್ಯಾನ್ಸರ್,ಸರ್ವಿಕ್ಸ್ ಕ್ಯಾನ್ಸರ್, ಗರ್ಭಿಣಿ ಸ್ತಿಯರಲ್ಲಿ ಅವಧಿ ಪೂರ್ವ ಹೆರಿಗೆ, ಅಬಾರ್ಷನ್ನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ.ಗರ್ಭಿಣಿ ಮಹಿಳೆಯರು ಧೂಮಪಾನ ಮಾಡುವವರಿಂದಲೂ ದೂರವಿರಬೇಕು.” ಎಂದು ಹೇಳಿದ್ದರು.

ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ|| ಗಣೇಶ ಟಿ.ಹೆಚ್. “ ವಿಶ್ವ ಆರೋಗ್ಯ ಸಂಸ್ಥೆಯವರು ಪ್ರತಿ ವರ್ಷ ಮೇ 31 ರಂದು ತಂಬಾಕು ರಹಿತ ದಿನಾಚರಣೆ ಜಗತ್ತಿನ್ಯಾದಂತ ಆಚರಿಸಲಾಗುತ್ತಿದೆ.ಸಾರ್ವಜನಿಕರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಇರಬೇಕು. ಇಂತಹ ಮಾಹಿತಿ ನೀಡುವ ಕಾರ್ಯಕ್ರಮಗಳಲ್ಲಿ ಭಾಗಹಿಸಿ ಹೆಚ್ಚಿನ ಅರಿವು ಪಡೆದುಕೊಳ್ಳಬೇಕು. ತಂಬಾಕು ಸೇವನೆ ಹೆಚ್ಚಿದಂತೆ ಆರೋಗ್ಯಕ್ಕೆ ಸಂಬoಧಿಸಿದ ಆರ್ಥಿಕ ವೆಚ್ಚ ಅಧಿಕವಾಗುತ್ತ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಾನೆ. ಅನಾರೋಗ್ಯಕರ ನೋವಿನ ಜೀವನ ನಡೆಸಬೇಕಾಗುತ್ತದೆ. ಇಂತಹ ಕಾರ್ಯಕ್ರಮಗಳಿಂದ ಅರಿವು ಪಡೆದು ತಂಬಾಕು ಸೇವನೆಯಿಂದ ದೂರವಾದರೆ ಕಾರ್ಯಕ್ರಮ ಮಾಡಿದ್ದು ಸಾರ್ಥಕವಾಗುತ್ತದೆ” ಎಂದು ಹೇಳಿದ್ದರು .ಡಾ|| ಗಜಾನನ ಭಾಗ್ವತ ಕಾರ್ಯಕ್ರಮ ನಿರೂಪಿಸಿದರು. ಡಾ|| ಮಮತಾ ಪಟಗಾರ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ವೈದ್ಯಾಧಿಕಾರಿಗಳು,ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಭಾಗವಹಿಸಿದರು.

Exit mobile version