Focus News
Trending

ರಶ್ಮಿ ಹೆಗಡೆಗೆ ಒಲಿದ ಮಿಸೆಸ್ ಇಂಡಿಯಾ ಕಿರೀಟ

ಶಿರಸಿ: ಗೋವಾದಲ್ಲಿ ನಡೆದ ಮಿಸ್ಟರ್ ಎಂಡ್ ಮಿಸೆಸ್ ವರ್ಲ್ಡ್ ಇಂಟರ್ನ್ಯಾಷನಲ್ ಇಂಡಿಯಾ ಬ್ಯೂಟಿ ಪ್ರೆಸೆಂಟ್ ಕಾಂಪಿಟೇಶನಲ್ಲಿ ತಾಲೂಕಿನ ಕುಳವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡಿಗೇರಿ ಗ್ರಾಮದ ರಶ್ಮಿ ಹೆಗಡೆ ಮಿಸೆಸ್ ವಿಭಾಗದಲ್ಲಿ ರತ್ನಖಚಿತವಾದ ರೆಪ್ಲಿಕಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.

ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 60 ಮಹಿಳೆಯರು ಪಾಲ್ಗೊಂಡಿದ್ದರು. ಅಂತಿಮವಾಗಿ 16 ಮಹಿಳೆಯರು ಫೈನಲ್ ಹಂತಕ್ಕೆ ಬಂದಿದ್ದರು. ರಶ್ಮಿಯವರ ಪ್ರತಿಭೆ ಮತ್ತು ಬೆಲ್ಲಿ ಡ್ಯಾನ್ಸ್ಗೆ ಮೆಚ್ಚಿದ ನಿರ್ಣಾಯಕರು ಅಂತಿಮವಾಗಿ ರೆಪ್ಲಿಕಾ ಕಿರೀಟವನ್ನು ರಶ್ಮಿಯವರ ಮುಡಿಗೇರಿಸಿದ್ದಾರೆ. ರಶ್ಮಿಯವರು ಮೈಸೂರು ವಿವಿಯಲ್ಲಿ ಬಿಎ ಪದವಿ ಮುಗಿಸಿದ್ದು, ಸೆಲಿಬ್ರೆಟಿ ಮೇಕಪ್ ಆರ್ಟಿಸ್ಟಾಗಿ ಕೆಲಸ ಮಾಡುತ್ತಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button