ಹೊನ್ನಾವರ – ಅಪ್ಸರಕೊಂಡದಲ್ಲಿ ಗುಡ್ಡ ಕುಸಿತ
ಕೆಳಗಿನೂರು ಗ್ರಾಮದ ಅಪ್ಸರಕೊಂಡದಲ್ಲಿ ಬೃಹತ್ ಗುಡ್ಡ ಕುಸಿತ ಸಂಭವಿಸಿದ್ದು, ಮಣ್ಣಿನ ಅಡಿಯಲ್ಲಿ ಬೈಕ್ ಒಂದು ಸಿಲುಕಿದೆ.
ರಸ್ತೆಯ ಪಕ್ಕದಲ್ಲಿ ಬೃಹತ್ ಬಂಡೆಗಳು ಉರುಳಿಬರುತ್ತಿರುವುದನ್ನು ಕಂಡು ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿಬಂದು ಆತಂಕಿತರಾಗಿ ನಿಂತುನೋಡುತ್ತಿರುವಾಗಲೇ ಬ್ರಹತ್ ಗುಡ್ಡ ರಸ್ತೆಗೆ ಜಾರಿದೆ.
ಹಗಲುಹೊತ್ತಿನಲ್ಲಿ ದುರಂತ ಸಂಭವಿಸಿದ ಕಾರಣ ಸಾವು ನೋವು ಸಂಭವಿಸಿಲ್ಲವಾದರೂ ರಸ್ತೆಯಮೇಲೆ ಪೂರ್ತಿ ಮಣ್ಣುಕಲ್ಲು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯ ಕೆಳಗೆ ಹಲವಾರು ಮನೆಗಳಿದ್ದು ಮಣ್ಣು ಕುಸಿಯುವ ಪ್ರಕ್ರಿಯೆ ಮುಂದುವರಿದರೆ ಹೆಚ್ಚಿನ ಅಪಾಯ ಎದುರಾಗಲಿದೆ.
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ