ಸೋಂಕಿತರು ಪ್ರಯಾಣದ ವಿವರ ಕೊಡಬೇಕು
ಸುಳ್ಳು ಮಾಹಿತಿ ನೀಡಿದರೆ ಕಠಿಣ ಕ್ರಮ
ಗುಣಮುಖರಾದ ಬಳಿಕ ಎಫ್‌ಐಆರ್
ಕುಮಟಾ: ಮಹಾಮಾರಿ ನಿಯಂತ್ರಕ್ಕೆ ತಾಲೂಕಾಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸೋಂಕಿತರು ತಾವು ಯಾರ ಸಂಪರ್ಕ ಹೊಂದಿದ್ದೇವೆ. ಹಾಗೂ ಪ್ರಯಾಣದ ವಿವರಗಳನ್ನು ಬಚ್ಚಿಟ್ಟು ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಥವಾ ಮುಚ್ಚಿಟ್ಟಲ್ಲಿ ಅವರು ಗುಣಮುಖರಾಗಿ ಬಂದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಅಜಿತ್ ಎಮ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕರೊನಾ ಕಾಯಿಲೆ ದೃಢಪಟ್ಟ ಕೆಲ ಸೋಂಕಿತರು ತಮ್ಮ ಸಂಪರ್ಕ ಹಾಗೂ ಪ್ರಯಾಣದ ಕುರಿತು ಸುಳ್ಳು ಮಾಹಿತಿ ನೀಡಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯವರನ್ನು ಪೇಚಿಗೆ ಸಿಲುಕುಂತೇ ಮಾಡಿದ್ದಾರೆ ಇದರಿಂದಾಗಿ ಕಾಯಿಲೆ ಮೂಲ ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ನೈಜ ಸಂಗತಿ ಮುಚ್ಚಿಡುವ ಕಾರಣ ರೋಗ ಇನ್ನೊಬ್ಬರಿಗೆ ಹರಡಲು ಕಾರಣ ವಾಗುತ್ತಿದ್ದಾರೆ. ಕಾರಣ ಯಾವುದೇ ಕೊರೋನಾ ದೃಢಪಟ್ಟ ಸೋಂಕಿತರು ತಮ್ಮ ಎಲ್ಲಾ ವಿವರಗಳನ್ನು ಪಾರದರ್ಶಕವಾಗಿ ತಿಳಿಸಬೇಕು. ಇಲ್ಲವಾದಲ್ಲಿ ಅಂತವರು ಗುಣಮುಖರಾಗಿ ಬಂದ ನಂತರ FIR (ಪ್ರಕರಣ ) ದಾಖಲಿಸಲಾಗುವುದು.ಅಲ್ಲದೆ ಕೊರೋನಾ ಕಾಯಿಲೆ ನಿಯಂತ್ರಣ ಕುರಿತು ತಾಲೂಕು ಆಡಳಿತ ನಿಗಾವಹಿಸಿದ್ದು ಸಾರ್ವಜನಿಕರು ಯಾವುದೇ ಆತಂಕ ಪಡಬಾರದು.ಚಿಕಿತ್ಸೆ ಸಂಬಂಧ ಎಲ್ಲಾ ವ್ಯದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. – ಅಜಿತ್ ಎಮ್, ಸಹಾಯಕ ಆಯುಕ್ತರು, ಕುಮಟಾ
ವಿಸ್ಮಯ ನ್ಯೂಸ್, ಕುಮಟಾ