ಭಟ್ಕಳದಲ್ಲಿ ಕರೊನಾ ಆರ್ಭಟ| ಒಂದು ಸಾವು

ಚಿಕಿತ್ಸೆ ಫಲಿಸದೆ ವೃದ್ಧ ಸಾವು
ಪೊಲೀಸ್ ಪೇದೆಯ ಕುಟುಂಬಕ್ಕೂ ಅಂಟಿದ ಕರೊನಾ

[sliders_pack id=”2570″]

ಭಟ್ಕಳ: ತಾಲೂಕಿನಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು ಇಂದು 13 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಓರ್ವ ವ್ಯಕ್ತಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ತಾಲೂಕಿನ 43,56 ವರ್ಷದ ಮಹಿಳೆ ,24 25 ವರ್ಷದ ಯುವತಿ, 13,9,13 ವರ್ಷದ ಯುವತಿ, 5,6 ವರ್ಷದ ಬಾಲಕ, 24 ವರ್ಷದ ಯುವಕ ,62 ವರ್ಷದ ವೃದ್ಧ, ಎಂದು ತಿಳಿದು ಬಂದಿದ್ದು

ಈ ಪೈಕಿ, ಪಟ್ಟಣದಲ್ಲಿ ‘ಕೊರೋನಾ ವಾರಿಯರ್’ ಆಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ 26 ವರ್ಷದ ಪತ್ನಿ ಹಾಗೂ ಒಂದು ವರ್ಷದ ಗಂಡು ಮಗುವಿಗೆ ಸೋಂಕು ಇರುವುದು ಪತ್ತೆಯಾಗಿದೆ. ನರ್ಸಗೆ ಸೋಂಕು ಪತ್ತೆಯಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದರಿಂದ ಪೊಲೀಸ್ ಕಾನ್ ಸ್ಟೇಬಲ್ ಪತ್ನಿ ಹಾಗೂ ಮಗುವಿಗೆ ಸೋಂಕು ಪತ್ತೆಯಾಗಿರ ಬಹುದೆಂದು ಮಾಹಿತಿ ಇದೆ

ಸೋಂಕು ಪತ್ತೆಯಾದ 62 ವರ್ಷದ ಸೋಂಕಿತ ವೃದ್ದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರಕಿದೆ.

ಭಟ್ಕಳದಲ್ಲಿ 208 ಮಂದಿಗೆ ಈವರೆಗೆ ಸೋಂಕು ದೃಢಪಟ್ಟಿದ್ದು, 58 ಮಂದಿ ಗುಣಮುಖರಾಗಿದ್ದಾರೆ. 149 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಇಬ್ಬರ ಸಾವಾಗಿದ್ದು, ಇಬ್ಬರದ್ದೂ ಮಂಗಳೂರಿನಲ್ಲಾಗಿದೆ. ಈ ಪೈಕಿ ಒಂದು ಸಾವಿನ ಪ್ರಕರಣವನ್ನು ಮಂಗಳೂರಿಗೆ ಸೇರಿಸಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ,ಭಟ್ಕಳ

[sliders_pack id=”1487″]
Exit mobile version