ಭಟ್ಕಳ - 13
ಯಲ್ಲಾಪುರ - 4
ಹಳಿಯಾಳ - 2
[sliders_pack id=”1487″]ಕಾರವಾರ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಇಂದೂ ಕೂಡಾ ಸುಮಾರು 20 ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಬಂದಿದೆ. ಜಿಲ್ಲೆಯಲ್ಲಿ ಭಟ್ಕಳ ಕರೊನಾ ಹಾಟ್‌ಸ್ಪಾಟ್ ಆಗಿದ್ದು, ಬುಧವಾರವೂ ತಾಲೂಕಿನಲ್ಲಿ 13 ಜನರಿಗೆ ಪಾಸಿಟಿವ್ ಕಂಡುಬOದಿದೆ. ಯಲ್ಲಾಪುರದಲ್ಲಿ ನಾಲ್ಕು, ಹಳಿಯಾದ ಇಬ್ಬರಲ್ಲಿ ಸೋಂಕು ದೃಢಪಟ್ಟ ಮಾಹಿತಿಬಂದಿದೆ. ಕಾರವಾರದ 45 ವರ್ಷದ ಮಹಿಳೆಗೂ ಪಾಸಿಟಿವ್ ಬಂದಿದೆ. ಆದರೆ, ಇಂದು ಕಳೆದ ಎರಡು ಮೂರುದಿನಗಳಿಂದ ಹೆಚ್ಚೆಚ್ಚು ಪ್ರಕರಣ ಕಂಡುಬರುತ್ತಿದ್ದ ಕುಮಟಾ, ಹೊನ್ನಾವರ, ಶಿರಸಿ, ಅಂಕೋಲಾದಲ್ಲಿ ಈಗಿನ ಮಾಹಿತಿಯಂತೆ ಯಾವುದೇ ಪಾಸಿಟಿವ್ ಕಂಡುಬಂದಿಲ್ಲ. ಸಂಜೆಯ ಹೆಲ್ತ್ ಬುಲೆಟಿನ್‌ಲ್ಲಿ ಈ ಕುರಿತ ಅಧಿಕೃತ ಮಾಹಿತಿ ಮತ್ತು ಅಂಕಿ-ಸಂಖ್ಯೆ ಹೊರಬೀಳಲಿದೆ.
ಕುಮಟಾ, ಹೊನ್ನಾವರ, ಶಿರಸಿ, ಅಂಕೋಲಾದಲ್ಲಿ ಈಗಿನ ಮಾಹಿತಿಯಂತೆ ಯಾವುದೇ ಪಾಸಿಟಿವ್ ಕಂಡುಬಂದಿಲ್ಲ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್