ಯಾಣದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಜೋತ್ಸವ -2022

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಹಸಿರು ಕರ್ನಾಟಕದ ಅಂಗವಾಗಿ ಬೀಜೋತ್ಸವ ಕಾರ್ಯಕ್ರಮ ನಡೆಸಲಾಯಿತು.ಶಾಲಾ ಮಕ್ಕಳಿಗೆ ಮಗುವಿಗೊಂದು ಮರ ಶಾಲೆಗೊಂದು ವನ, ಮನೆಗೊಂದು ಮರ ಊರಿಗೊಂದು ವನ, ಊರಿಗೊಂದು ವನ ತಾಲೂಕಿಗೊಂದು ಕಿರು ಅರಣ್ಯ. ತಾಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ಹೀಗೆ ಹಸಿರು ಕರ್ನಾಟಕದ ಬಗ್ಗೆ ವಿವರಿಸಲಾಯಿತು. ಮಕ್ಕಳಿಗೆ ಅರಣ್ಯದಲ್ಲಿ ಗಿಡ-ಮರ ಮತ್ತು ಪರಿಸರದ ಬಗ್ಗೆ ಜಾಗೃತೆ ಮೂಡಿಸಲಾಯಿತು. ಪರಿಸರ ಪಾಠದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಶಾಲಾ ಆವರಣದಲ್ಲಿ ಮತ್ತು ಅರಣ್ಯದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳೊಂದಿಗೆ ವಿವಿಧ ಜಾತಿಯ ಬೀಜಗಳನ್ನು ಬಿತ್ತಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಣ್ಯ ಮತ್ತು ಪರಿಸರದ ಬಗ್ಗೆ ವಿವರಿಸಲಾಯಿತು.

ಕಾರ್ಯಕ್ರಮದ ಪರವಾಗಿ ಶ್ರೀ ಜಿ.ಕೆ. ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕುಮಟಾ ಹಾಗೂ ಶ್ರೀ ದೀಪಕ ಎ. ನಾಯ್ಕ, ವಲಯ ಅರಣ್ಯಾಧಿಕಾರಿಗಳು ವಲಯ ಅರಣ್ಯಾಧಿಕಾರಿ ಕತಗಾಲ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ|| ಪ್ರಸನ್ನ ನಾಯ್ಕ ಮತ್ತು ಡಾ|| ಚೈತ್ರ ಪ್ರಭಾ, ಪ್ರಾಥಮಿಕ ಆರೋಗ್ಯ ಕೇಂದ್ರ ಕತಗಾಲ, ಶ್ರೀಮತಿ ಕೇಸರಿ ಉದಯ ನಾಯಕ, ಅಧ್ಯಕ್ಷರು ಗ್ರಾಮ ಪಂಚಾಯತ ಕತಗಾಲ, ಶ್ರೀ ದೀಪಯ್ಯ ನಾಯ್ಕ, ಅಧ್ಯಕ್ಷರು ವಿ.ಎಫ್.ಸಿ. ಯಾಣ ಹಾಗೂ ಶಾಲಾ ಮುಖ್ಯೋಧ್ಯಾಪಕರು, ಶಿಕ್ಷಕರು, ಗ್ರಾಮ ಪಂಚಾಯತ ಸದಸ್ಯರು, ಅರಣ್ಯ ಸಮಿತಿ ಸದಸ್ಯರು, ಅರಣ್ಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಶ್ರೀ ವಸಂತ ಗೌಡ, ಉಪ ವಲಯ ಅರಣ್ಯಾಧಿಕಾರಿ ಹಾಗೂ ಶ್ರೀ ಡಿ.ಬಿ. ಹರಿಕಂತ್ರ, ಸುಗಮಗಾರರು ಕಾರ್ಯಕ್ರಮವನ್ನು ಸಂಘಟಿಸಿದರು.

Exit mobile version