ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಸುಮಂತ ಹೆಗಡೆ: ಅಭಿನಂದನೆ

ಹೊನ್ನಾವರ ತಾಲೂಕಿನ ಮುಗ್ವಾ ಗಾಳಿಮನೆಯ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಶ್ಯಾಮಸುಂದರ ಹೆಗಡೆ ಮತ್ತು ಲತಾ ಹೆಗಡೆ ಇವರ ಮಗನಾದ ಸುಮಂತ ಹೆಗಡೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾನೆ. ಬೆಂಗಳೂರಿನ ಜಯನಗರದ ಆರ್. ವಿ. ಪಿ ಯು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು ವಿಜ್ಞಾನ ವಿಭಾಗದಲ್ಲಿ 94% ಹಾಗೂ ಪಿಸಿಎಮ್ ವಿಭಾಗದಲ್ಲಿ 98.6% ಅಂಕ ಗಳಿಸಿದ್ದಾನೆ.

ಮೆತ್ ಮೆಟಿಕ್ಸ್ ಮತ್ತು ಕೆಮಿಸ್ಟ್ರಿ ಯಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದು ಸಾಧನೆ ಮಾಡಿದ್ದು, ಸುಮಂತನ ಸಾಧನೆಗೆ ಅಪ್ಪ , ಅಮ್ಮ, ಅಜ್ಜ ಸುಬ್ರಹ್ಮಣ್ಯ ಹರಿಹರ ಹೆಗಡೆ, ಅಜ್ಜಿ, ಸರಸ್ವತಿ ಹೆಗಡೆ, ಶಿಕ್ಷಕ ವೃಂದ, ಬಂಧುಗಳು, ಆತ್ಮೀಯರು ಅಭಿನಂದಿಸಿ, ಶುಭಕೋರಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version