ಜೂನ್ 21 ರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಅಂಕೋಲಾದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಯೋಗದ ಮಹತ್ವ ಸಾರುವ ಜಾಥ ಆಯೋಜಿಸಲಾಗಿತ್ತು. ಸಿಪಿಐ ಸಂತೋಷ್ ಶೆಟ್ಟಿ ಜಾಥಾಕ್ಕೆ ಚಾಲನೆ ನೀಡಿದರು.
ಪತಂಜಲಿ ಯೋಗ ಸಮಿತಿ ಅಂಕೋಲಾ, ಭಾರತ ಸ್ವಾಭಿಮಾನ ಟ್ರಸ್ಟ್ ಅಂಕೋಲಾ, ಕಿಸಾನ್ ಯೋಗ ಸಮಿತಿ,ಪತಂಜಲಿ ಮಹಿಳಾ ಸಮಿತಿ, ಯುವ ಭಾರತ ಹಾಗೂ ಲಯನ್ಸ್ ಕ್ಲಬ್ ಆಪ್ ಅಂಕೋಲಾ ಸಿಟಿ ಇವರ ಸಂಯುಕ್ತ ಆಶ್ರಯದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪಟ್ಟಣದಲ್ಲಿ ಯೋಗ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಉಪ ತಹಶೀಲ್ಧಾರ ಗಿರೀಶ ಜಾಂಬಾವಳಿಕರ ಮತ್ತು ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರು ತಹಶೀಲ್ಧಾರರ ಕಾರ್ಯಾಲಯದ ಎದುರು ಜಾಥಾಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರು ಮಾತನಾಡಿ ಯೋಗ ಪದ್ಧತಿ ಭಾರತೀಯ ಪ್ರಾಚೀನ ಪರಂಪರೆಯಾಗಿದ್ದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ, ಜಗತ್ತು ಇಂದು ಭಾರತೀಯ ಯೋಗ ಪದ್ಧತಿಯನ್ನು ಒಪ್ಪಿಕೊಂಡು ಮನ್ನಣೆ ನೀಡಿದೆ, ಯೋಗದ ಮೂಲಕ ಎಲ್ಲರೂ ಆರೋಗ್ಯಯುತ ಜೀವನದತ್ತ ಸಾಗಬೇಕು ಎಂದರು.
ಯೋಗ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಯೋಗದ ಕುರಿತು ಜಾಗೃತಿ ಮೂಡಿಸಲಾಯಿತು. ಸಂಘಟಕ ಪ್ರಮುಖರಾದ ವಿನಾಯಕ ಗುಡಿಗಾರ,ಜ್ಯೋತ್ಸ್ನಾ ನಾರ್ವೇಕರ್,ಎಂ.ಎಂ.ಕರ್ಕಿಕರ್, ಅಭಯ ಮರಬಳ್ಳಿ,ನಾಗವೇಣಿ ನಾಯ್ಕ, ರಾಧಿಕಾ ಆಚಾರಿ, ಶೋಭಾ ಶೆಟ್ಟಿ, ಸುಗಂಧಾ ಆಚಾರಿ, ರಶ್ಮಿ ನಾಯಕ, ಸಂಧ್ಯಾ ಕಾಕರಮಠ, ವಿ.ಕೆ.ನಾಯರ್, ರಾಮಾ ನಾಯ್ಕ, ಸುರೇಶ ನಾಯ್ಕ ಮೊದಲಾದವರು ಪಾಲ್ಗೊಂಡಿದ್ದರು.
ಯೋಗ ಗುರು ರಾಜು ಹರಿಕಂತ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ವಿಶ್ವದರ್ಶನ ನರ್ಸಿಂಗ್ ಸ್ಕೂಲ್ ಸೇರಿದಂತೆ,ಪಟ್ಟಣ ವ್ಯಾಪ್ತಿಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು,ಸಂಘ ಸಂಸ್ಥೆಗಳ ಪ್ರಮುಖರು,ಯೋಗಾಸಕ್ತರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ,ಸಮಸ್ಯೆಗಳು ಹಲವಾರು ಯೋಗ ಒಂದೇ ಪರಿಹಾರ ಎಂಬ ದ್ಯೇಯ ವಾಕ್ಯದ ಘೋಷಣೆ ಕೂಗುತ್ತಾ ಸರ್ವಜನಿಕ ಜಾಗೃತಿಗೆ ಪ್ರಯತ್ನಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ