ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗದಿನ ಆಚರಣೆ

ಕುಮಟಾ : ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗದಿನ ಆಚರಣೆಯನ್ನು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಔಚಿತ್ಯಪೂರ್ಣವಾಗಿ ಆಚರಿಸಲಾಯಿತು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಪ್ರೊ. ಜಿ. ಡಿ. ಭಟ್ ಇವರು ಯೋಗಶಾಸ್ತçದ ಕುರಿತಾಗಿ ಪ್ರತಿಪಾದಿಸುತ್ತ ಯೋಗದ ಮಹತ್ವವನ್ನು ಪತಂಜಲಿಯವರ ಅಷ್ಟಾಂಗ ಯೋಗಗಳ ನಿರ್ದಿಷ್ಟ ಉದಾಹರಣೆಗಳೊಂದಿಗೆ ವಿವರಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಡಾ. ಪ್ರೀತಿ ಭಂಡಾರಕರ ಇವರು ವಿಶ್ವ ಯೋಗದಿನದ ಮಹತ್ವವನ್ನು ಹಲವಾರು ದೃಷ್ಟಾಂತಗಳೊoದಿಗೆ ವಿಷದಿಕರಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಯಾದ ಕುಮಾರ. ಬೊಮ್ಮು ಟಿ. ಕೆ. ಇವರು ಪ್ರಾತ್ಯಕ್ಷಿಕೆಯನ್ನು ನೀಡಿದರು. ಕ್ರೀಡಾ ಕಾರ್ಯದರ್ಶಿ ಕಿರಣ ನಾಯ್ಕ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Exit mobile version