ದೀವಗಿಯ ಕೆಳಗಿನ ಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ

ಕುಮಟಾ: ತಾಲೂಕಿನ ದೀವಗಿಯ ಕೆಳಗಿನ ಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದೀವಗಿಯ ಚೇತನಾ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಚೇತನಾ ಸೇವಾ ಸಂಸ್ಥೆಯ ಸಂಚಾಲಕಿ ಎ ಆರ್ ಭಾರತಿ ಮಾತನಾಡಿ ಇವತ್ತು ಜನರು ಕೇವಲ ದೈಹಿಕ ಆರೋಗ್ಯಕ್ಕಾಗಿಯೇ ಹೆಚ್ಚಿನ ಗಮನವನ್ನು ಕೊಡುತ್ತಿದ್ದಾರೆ. ಆದರೆ ಇದರ ಜೊತೆ ಜೊತೆಗೆ ಮಾನಸಿಕ ರೋಗಗಳಾದ ಭಯ, ಚಿಂತೆ, ಕೋಪ, ನಿರಾಶೆ ಇವುಗಳನ್ನೂ ಅರಿತು ಸಮಾಜದಲ್ಲಿ ಜಾಗೃತಿ ಮೂಡಿಸಿ ಚಿಕ್ಕ ವಯಸ್ಸಿನಿಂದಲೇ ಇವುಗಳ ಸಂಹಾರ ಮಾಡುವುದರ ಮೂಲಕ ಮಕ್ಕಳನ್ನು ಸರ್ವರೋಗ ಮುಕ್ತರನ್ನಾಗಿ ಮಾಡಬಹುದು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ಆರ್ ಕೆ ಅಂಬಿಗ, ಶಿಕ್ಷಕ ಮಹೇಶ ಹೆಗಡೆ, ಸ್ಥಳೀಯ ಅಂಬಿಗರಕೊಪ್ಪ ಅಂಗನವಾಡಿ ಕಾರ್ಯಕರ್ತೆ ಸವಿತಾ ತನ್ಮಡ್ಗಿ ಮಾತನಾಡಿದರು. ಶಿಕ್ಷಕಿ ಜ್ಯೋತಿ ಅಂಬಿಗ, ಅಂಗನವಾಡಿ ದೀವಗಿ 1 ರ ಕಾರ್ಯಕರ್ತೆ ರಾಜೇಶ್ವರಿ ಅಂಬಿಗ ಉಪಸ್ಥಿತರಿದ್ದರು.

Exit mobile version