ಧಾರಾಕಾರ ಮಳೆಗೆ ಕುಸಿದ ಮನೆಯ ಗೋಡೆ: ಮಹಿಳೆಗೆ ಗಾಯ

ಕಾರವಾರ : ಉತ್ತರಕನ್ನಡದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹಲವು ಅವಾಂತರಗಳು ಸೃಷ್ಟಿಯಾಗುತ್ತಿದೆ. ಧಾರಾಕಾರ ಮಳೆಗೆ ಗೋಕರ್ಣದಲ್ಲಿ ಮನೆಯ ಗೋಡೆ ಕುಸಿದು ಬಿದ್ದು ಓರ್ವ ಮಹಿಳೆ ಅಸ್ವಸ್ಥವಾದ ಘಟನೆ ನಡೆದಿದೆ.

ನಿರಂತರವಾಗಿ ಸುರಿದ‌ ಮಳೆಗೆ ಪಾಳು ಬಿದ್ದ ಮನೆಗೋಡೆ ಕುಸಿದಿದ್ದು, ಅಲ್ಲಿಯೇ ಕೆಲಸ ಮಾಡುತಿದ್ದ ನೇತ್ರಾವತಿ ಗಾಂವಡಿ ಎನ್ನವ ಮಹಿಳೆ ಮೇಲೆ ಬಿದ್ದಿದೆ. ಮಹಿಳೆ ಅಸ್ವಸ್ಥಳಾಗಿದ್ದು ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಸ್ಮಯ ನ್ಯೂಸ್ ಗೋಕರ್ಣ

Exit mobile version