ಹನುಮoತನ ಕೃಪೆಯಿಂದ ಅದೆಷ್ಟೋ ಭಕ್ತರ ಕಷ್ಟಗಳು ನಿವಾರಣೆಯಾಗಿವೆ. ಗುಣಪಡಿಸಲಾಗದ ಅದೆಷ್ಟೋ ಸಮಸ್ಯೆಗಳು ಮಾಯವಾಗಿವೆ. ಭಕ್ತರ ಇಷ್ಟಾರ್ಥ ಸಿದ್ಧಿಸಿದ ಉದಾಹರಣೆಗೆ ಲೆಕ್ಕವಿಲ್ಲ. ಹೀಗಾಗಿ ಪ್ರತಿನಿತ್ಯ ದೇವಸ್ಥಾನಕ್ಕೆ ಭಕ್ತರ ದಂಡೆ ಹರಿದು ಬರುತ್ತದೆ. ಹೌದು, ಚಂದಾವರ ಸೀಮೆಯ ಹನುಮಂತ ದೇವರ ಪವಾಡವೇ ಅಂಥದ್ದು.
ಕುಮಟಾ: ಶ್ರೀ ಹನುಮಂತ ದೇವಸ್ಥಾನ, ( Chandavar Hanuman Temple ) ಚಂದಾವರ ಸೀಮೆಯ ಅಪಾರ ಭಕ್ತರನ್ನ ಹೊಂದಿರುವ ಸುಪ್ರಸಿದ್ಧ ಶಕ್ತಿಕ್ಷೇತ್ರ.. ಇಲ್ಲಿನ ಹನುಮಂತ ದೇವಸ್ಥಾನ ಕಲಿಯುಗದ ಕಾಮಧೇನುವಾಗಿ, ಭಕ್ತರ ಸಂಕಷ್ಟ ಪರಿಹರಿಸುವ ಸಿದ್ಧಿಕ್ಷೇತ್ರವಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದಲ್ಲಿರುವ ಈ ಹನುಮಂತ ದೇವಸ್ಥಾನ, ಚಂದಾವರ ಸೀಮೆ ಹನುಮಂತ ಎಂದೇ ಪ್ರಸಿದ್ಧಿ ಪಡೆದಿದೆ.
ಇದು ಕುಮಟಾ ಹೊನ್ನಾವರ ಎರಡು ಊರಿಗೂ ಸಂಭoದಪಟ್ಟ ದೇವಸ್ಥಾನ. ಅಘನಾಶಿನಿ ನದಿ ಗಡಿ ಮತ್ತು ಶರಾವತಿ ನದಿ ಗಡಿಯ ತನಕ ಈ ದೇವರ ವ್ಯಾಪ್ತಿ ಎದೆ. ಇಲ್ಲಿನ ಜನರು ಹಿಂದಿನಿoದಲೂ ಈ ದೇವರಿಗೆ ನಡೆದುಕೊಂಡು ಬರುತ್ತಿದ್ದಾರೆ. ಇಲ್ಲಿನ ಹನುಮಂತ ದೇವರ ಮಹಿಮೆ ಅಗಾಧ.. ಅನಂತ..
( Chandavar Hanuman Temple) ಹನುಮoತನ ಕೃಪೆಯಿಂದ ಅದೆಷ್ಟೋ ಭಕ್ತರ ಕಷ್ಟಗಳು ನಿವಾರಣೆಯಾಗಿವೆ. ಗುಣಪಡಿಸಲಾಗದ ಅದೆಷ್ಟೋ ಸಮಸ್ಯೆಗಳು ಮಾಯವಾಗಿವೆ. ಹೀಗಾಗಿ ಪ್ರತಿನಿತ್ಯ ದೇವಸ್ಥಾನಕ್ಕೆ ಭಕ್ತರ ದಂಡೆ ಹರಿದು ಬರುತ್ತದೆ. ಶನಿವಾರದಂದು ವಿಶೇಷ ಅಲಂಕಾರ ಹಾಗೂ ವಿಶೆಷ ಪೊಜೆ ನಡೆಯುತ್ತದೆ. ಅಲ್ಲದೆ ಬಾಳೆಕೊನೆ ಪೂಜೆ ವಿಶೇಷವಾದದು. ಕಾರ್ತಿಕದಲ್ಲಿ ದೀಪೋತ್ಸವ ಕಾರ್ಯಕ್ರಮ, ಹೊಳೆದಡದಲ್ಲಿ ವನಭೋಜನ ಇತ್ಯಾದಿ ಕಾರ್ಯಕ್ರಮ ನಡೆಯುತ್ತದೆ.
ವಿಸ್ಮಯ ನ್ಯೂಸ್ ಕುಮಟಾ