(IFS) ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 2ನೇ Rank: ಸಾಧಕನಿಗೆ ಅಭಿನಂದನೆ ಸಲ್ಲಿಸಿ
ಅಂಕೋಲಾ: ಕೇಂದ್ರ ಲೋಕ ಸೇವಾ ಆಯೋಗ (ಯು.ಪಿ.ಎಸ್. ಸಿ) ದಿಂದ ನಡೆಸಲಾಗಿದ್ದ ಭಾರತೀಯ ಅರಣ್ಯ ಸೇವೆ (IFS ) ಮುಖ್ಯ ಪರೀಕ್ಷೆಯಲ್ಲಿ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತೊರ್ಕೆಯ ವರದರಾಜ ಗಾಂವಕರ ರಾಷ್ಟ್ರಕ್ಕೆ ಎರಡನೇ ರ್ಯಾಂಕ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದರೆ, ಪ್ರತಿಷ್ಠಿತ ಕೇಶವ ಗಾಂವಕರ ಮನೆತನದ ಕುಡಿ ಆಗಿರುವ ವರದರಾಜ ತನ್ನ ಸಾಧನೆ ಮೂಲಕ ಕುಟುಂಬ ಹಾಗೂ ಈ ಹಿಂದಿಂನಿಂದಲೂ ಶೈಕ್ಷಣಿಕ ಸಾಧನೆಗೆ ಹೆಸರಾಗಿರುವ ತೊರ್ಕೆ ಗ್ರಾಮದ ಕೀರ್ತಿ ಹೆಚ್ಚಿಸಿದಂತಾಗಿದೆ.
ಅಂಕೋಲಾ ತಾಲೂಕಿನ ಹಿಂದುಳಿದ ಗ್ರಾಮೀಣ ಪ್ರದೇಶದ ಅಚವೆಯ ಅಪ್ಪಟ ಪ್ರತಿಭೆ ಎಸ್. ನವೀನಕುಮಾರ (ನವೀನ ಕುಮಾರ ಸೀತಾರಾಮ ಹೆಗಡೆ) ರಾಷ್ಟ್ರಕ್ಕೆ 62 ನೇ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಜಿಲ್ಲೆಯ ಕುಮಟಾ ಹಾಗೂ ಅಂಕೋಲಾ ತಾಲೂಕಿನ ಈರ್ವರು ತಮ್ಮ ಸಾಧನೆ ಮೂಲಕ ತಮ್ಮ ತಮ್ಮ ತಾಲೂಕು ಹಾಗೂ ಜಿಲ್ಲೆ ಮತ್ತು ನಾಡಿನ ಕೀರ್ತಿಯನ್ನು ಹೆಚ್ಚಿಸಿದಂತಾಗಿದೆ. ಇವರ ಸಾಧನೆಗೆ ಜಿಲ್ಲೆಯ ವಿವಿಧ ಕ್ಷೇತ್ರದ ಗಣ್ಯರು, ಶಿಕ್ಷಣ ಪ್ರೇಮಿಗಳು, ಸಾಧಕರ ಕುಟುಂಬದ ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ