ಗಾಂಜಾ ಅಮಲಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದ ಪೊಲೀಸರು : ವೈದ್ಯಕೀಯ ಪರೀಕ್ಷೆಯಲ್ಲಿಯೂ ದೃಢಪಟ್ಟ ಅಂಶ

ಪೆಡ್ಲರ್ ಗಳನ್ನು ಹಿಡಿಯುವುದು ಓಕೆ, ಮಾದಕ ಜಾಲ ಬೇಧಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಏಕೆ?

ಅಂಕೋಲಾ : ಗಾಂಜಾ ಸೇವಿಸಿದ್ದರೆನ್ನಲಾದ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದ ಪೋಲೀಸರು, ವೈದ್ಯಕೀಯ ಪರೀಕ್ಷೆಯಲ್ಲಿಯೂ ಅದು ದೃಢಪಟ್ಟ ಹಿನ್ನಲೆಯಲ್ಲಿ ಆರೋಪಿತರ ವಿರುದ್ಧ ಕಾನೂನು ಕ್ರಮ ಮುಂದುವರೆಸಿದ್ದಾರೆ. ಭಾವಿಕೇರಿಯ ಹರಿಕಂತ್ರವಾಡದ ರಾಘವೇಂದ್ರ ಗೋಪಾಲ ಹರಿಕಂತ್ರ(27), ಬಾಳೆಗುಳಿಯ ಕೃಷ್ಣಾಪುರದ ಸುಜನ ಬೀರಣ್ಣ ನಾಯಕ(23), ಹಾಗೂ ಸಣ್ಣ ಅಲಗೇರಿಯ ಗಣೇಶ ತಂದೆ ಲಕ್ಷ್ಮಣ ನಾಯಕ(25), ಬಂಧಿತ ಆರೋಪಿಗಳು.

ಈ ಮೂವರು ಆರೋಪಿತರು ಜೂನ್ 25 ರಂದು ಸಂಜೆ ತಾಲೂಕಿನ ರಾ.ಹೆ 66 ರ ಬಾಳೆಗುಳಿ ಹತ್ತಿರ ಅಲಗೇರಿ ಕ್ರಾಸ್ ಬಳಿಯ ಅರಣ್ಯ ಪ್ರದೇಶದ ಖುಲ್ಲಾ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವನೆ ಮಾಡಿದ ಹಾಗೆ ಸಂಶಯಾಸ್ಪದವಾಗಿ ಕಂಡು ಬಂದಾಗ, ಮತ್ತು ಅವರ ಬಾಯಿಯಿಂದ ಯಾವುದೋ ಘಾಟು ವಾಸನೆ ಬರುತ್ತಿದ್ದರಿಂದ ಸಿಪಿಐ ಸಂತೋಷ ಶೆಟ್ಟಿ ಮತ್ತು ಸಿಬ್ಬಂದಿಗಳು ಈ ಕುರಿತು ವಿಚಾರಣೆ ಮಾಡಿದಾಗ, ಆರೋಪಿತರು ತಾವು ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದರು.

ನಂತರ ಮೂವರೂ ಆರೋಪಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವರದಿಯಲ್ಲಿ ಆರೋಪಿತರು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟ ಹಿನ್ನಲೆಯಲ್ಲಿ ಪೊಲೀಸರು ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಮರ‍್ಗರ‍್ಶನದಲ್ಲಿ ಅಂಕೋಲಾ ತಾಲೂಕಿನ ಪೊಲೀಸ್ ಅಧಿಕಾರಿಗಳು ಉತ್ತಮವಾಗಿಯೇ ಕರ‍್ಯನರ‍್ವಹಿಸುತ್ತಿದ್ದರೂ ,ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಗಾಂಜಾ ಘಮಲು ಎಲ್ಲೆಡೆಯೂ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಗಾಂಜಾ ಸೇವನೆ ಮಾಡುವ ಬೆರಳೆಣಿಕೆಯ ಆರೋಪಿತರು, ಮತ್ತು ಚಿಕ್ಕಪುಟ್ಟ ಮಾರಾಟಗಾರರನ್ನು ಹಿಡಿಯುವ ಪೊಲೀಸರು,ಇದರ ಹಿಂದೆ ಇರುವ ದೊಡ್ಡ ಜಾಲವನ್ನು ಬೇಧಿಸಲು ಮೀನಾವೇಷ ಎಣಿಸಿದಂತೆ ಕಂಡುಬರುತ್ತಿದೆ. ಮಾದಕ ವ್ಯಸನದಿಂದ ಯುವಜನತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಪೊಲೀಸ್ ಇಲಾಖೆ ಈ ಕುರಿತು ಎಚ್ಚೆತ್ತುಕೊಂಡು ಅಕ್ರಮ ದಂಧೆಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಪೊಲೀಸ್ ಇಲಾಖೆಯ ಕೆಲವರು ಕಳ್ಳ ದಂಧೆ ಕೋರರ ಜೊತೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ವಕೀಲರಾದ ಉಮೇಶ ನಾಯ್ಕ ಇಲಾಖೆ ಕರ‍್ಯ ವೈಖರಿ ಕುರಿತು ಪ್ರಶ್ನಿಸಿದ್ದು,ಸಂಬಂಧಿತ ಇಲಾಖೆ ತನ್ನ ಕರ‍್ಯ ದಕ್ಷತೆ ತೋರಿಸಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version