ಹಾಲಕ್ಕಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಕಾರವಾರ: ಹಾಲಕ್ಕಿ ಒಕ್ಕಲಿಗರ ಸಂಘ (ರಿ) ಕುಮಟಾ 2021-22 ನೇ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿಯಲ್ಲಿ ಶೇಕಡ 85 ಮತ್ತು ಪಿಯುಸಿಯಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಅಂಕ ಪಡೆದ ಕುಮಟಾ ಹಾಗು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ಪ್ರತಿಭಾವಂತರನ್ನು ಗೌರವಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ದೃಢೀಕರಿಸಿದ ತಮ್ಮ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ ಮತ್ತು ವಿಳಾಸ ದೃಢೀಕರಿಸುವ ಆಧಾರ ಕಾರ್ಡ್ ಇಲ್ಲವೇ ಪಡಿತರ ಚೀಟಿ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅರ್ಜಿಯನ್ನು 15 ಜುಲೈ 2022 ರ ಒಳಗಾಗಿ ಸಲ್ಲಿಸಬೇಕು.

ಅಧ್ಯಕ್ಷರು/ಕಾರ್ಯದರ್ಶಿ,ಹಾಲಕ್ಕಿ ಒಕ್ಕಲಿಗರ ಸಂಘ (ರಿ) ಕುಮಟಾ, ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನ ದೀವಗಿ, ಅಂಚೆ: ದೀವಗಿ, ತಾ; ಕುಮಟಾ(ಉ.ಕ) ಇವರಿಗೆ ಅಂಚೆ ಮೂಲಕ ಇಲ್ಲವೇ ಖುದ್ದಾಗಿ ಕಾರ್ಯಾಲಯದ ಸಮಯದಲ್ಲಿ ಬಂದು ನೀಡಬಹುದು ಎಂದು ಸಂಘದ ಅಧ್ಯಕ್ಷ ಗೋವಿಂದಗೌಡ ಹಾಗೂ ಕಾರ್ಯದರ್ಶಿ ಶ್ರೀಧರ ಗೌಡ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version