ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಎಂ.ಪಿ.ಇ.ಸೊಸೈಟಿಯ ಸೆಂಟ್ರಲ್ ಶಾಲೆ ಭಾಜನ

ಹೊನ್ನಾವರ ತಾಲೂಕಿನ ಪ್ರತಿಷ್ಠಿತ ಎಂ.ಪಿ.ಇ.ಸೊಸೈಟಿಯ ಸೆಂಟ್ರಲ್ ಶಾಲೆಗೆ ಜಿಲ್ಲಾ ಮಟ್ಟದ ಸ್ವಚ್ಛ ವಿದ್ಯಾಲಯ ಎನ್ನುವ ಗೌರವ ಲಭಿಸಿದೆ. ಕಾರವಾರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಸೆಂಟ್ರಲ್ ಸ್ಕೂಲ್ ಗೆ ಸ್ವಚ್ಛ ವಿದ್ಯಾಲಯ ಅನ್ನುವ ಪುರಸ್ಕಾರ ನೀಡಲಾಗಿದೆ.

ಶಾಲೆಯಲ್ಲಿ ಸ್ವಚ್ಛತೆಗೆ ಅಳವಡಿಸಲಾಗಿರುವ ವಿವಿಧ ಕ್ರಮಗಳು ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಯೋಜನೆಗಳನ್ನು ಗಮನಿಸಿ ಈ ಪುರಸ್ಕಾರ ದೊರಕಿದೆ.

ಒಟ್ಟು 92% ಅಂಕಗಳೊಂದಿಗೆ ಸ್ವಚ್ಛ ವಿದ್ಯಾಲಯ ಪುರಸ್ಕಾರ ಲಭಿಸಿದೆ. ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಕಾಂತಿ ಭಟ್ ಹಾಗೂ ಸಹ ಶಿಕ್ಷಕಿಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಈ ಪ್ರಶಸ್ತಿಯನ್ನು ಪಡೆದುಕೊಂಡರು.ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಿಯಾಂಗ ಎಂ. , ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ , ಮಾನ್ಯ ಉಪನಿರ್ದೇಶಕ ಈಶ್ವರ್ ನಾಯ್ಕ್ ,ಇನ್ನಿತರರು ಹಾಜರಿದ್ದರು.ಸೆಂಟ್ರಲ್ ಸ್ಕೂಲ್ ನ ಈ ಸಾಧನೆಗೆ ಆಡಳಿತ ಮಂಡಳಿ , ಶಿಕ್ಷಕರು , ಪಾಲಕರು ಶುಭಾಶಯವನ್ನು ಕೋರಿದ್ದಾರೆ.

ವಿಸ್ಮಯ ನ್ಯೂಸ್ ಹೊನ್ನಾವರ

Exit mobile version