ವೇಗವಾಗಿ ಬಂದು ಬೊಲೆರೊಗೆ ಡಿಕ್ಕಿ ಹೊಡೆದ ಬಸ್ : ಇಬ್ಬರಿಗೆ ಗಂಭೀರ ಗಾಯ

ಶಿರಸಿ: ಅತಿವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್ಸೊಂದು ಎದುರಿನಿಂದ ಬರುತ್ತಿದ್ದ, ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಶಿರಸಿ-ಹುಬ್ಬಳ್ಳಿ ರಸ್ತೆಯ ಸಣ್ಣಕೇರಿ ಸಮೀಪ ಸಂಭವಿಸಿದೆ. ಅಪಘಾತದ ಹಿನ್ನಲೆಯಲ್ಲಿ ಬೊಲೆರೊ ವಾಹನದಲ್ಲಿದ್ದ ಇಬ್ಬರಿಗೆ ತೀವ್ರವಾದ ಗಾಯವಾಗಿದೆ. ಬೊಲೆರೊ ವಾಹನದಲ್ಲಿದ್ದ ರವೀಶ ಭಟ್ಟ ಯಲ್ಲಾಪುರ ಹಾಗೂ ಕೇಶವ ನಾಯ್ಕ ಸಾಗರ್ ತೀವ್ರವಾಗಿ ಗಾಯಗೊಂಡವರಾಗಿದ್ದಾರೆ.

ಹುಬ್ಬಳ್ಳಿ ಕಡೆಗೆ ಬೊಲೆರೊ ಹೋಗುತ್ತಿದ್ದು, ಇದೇ ಸಮಯದಲ್ಲಿ ಹುಬ್ಬಳ್ಳಿಯಿಂದ ಶಿರಸಿಗೆ ಬರುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ವೇಗವಾಗಿ ಬಂದು, ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ಶಿರಸಿ

Exit mobile version