ನಿಯಂತ್ರಣ ತಪ್ಪಿ ಸಮುದ್ರಕ್ಕೆ ಉರುಳಿಬಿದ್ದ ಕಾರು: ಚಾಲಕ ಸ್ಥಳದಲ್ಲೇ ಸಾವು: ಸಮುದ್ರದಲ್ಲಿ ಕೊಚ್ಚಿಹೋಗಿ ಇನ್ನೊಬ್ಬ ನಾಪತ್ತೆ

ಕುಮಟಾ: ಕುಂದಾಪುರದ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮರವಂತೆ ಸಮುದ್ರ ತೀರದ ಬಳಿ ನಡೆದ ಭೀಕರ ಅಪಘಾತದಲ್ಲಿ ಕುಮಟಾ ಪಟ್ಟಣದ ವಿಲಾಸ್ ಮಾರ್ಬಲ್ಸ್ ನ ವಿರಾಜ್ ಆಚಾರ್ಯ ಅವರು ಸಾವನಪ್ಪಿದ್ದಾರೆ.

ಕುಂದಾಪುರ ಕಡೆಯಿಂದ ಬೈಂದೂರು ಮಾರ್ಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮರವಂತೆ ಸಮುದ್ರಕ್ಕೆ ಉರುಳಿದ್ದು, ಪರಿಣಾಮ ಕಾರು ಸಂಪೂರ್ಣ ಜಕಮ್‌ಗೊಂಡು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ
ಸ್ಥಳದಲ್ಲಿಯೇ ಚಾಲಕ ವಿರಾಜ್ ಆಚಾರ್ಯ ಮೃತಪಟ್ಟಿದ್ದು, ಕಾರಿನಲ್ಲಿದ್ದ ಇನ್ನೊರ್ವನು ಸಮುದ್ರದಲ್ಲಿ ಕೊಚ್ಚಿಹೋಗಿರಬಹುದೆಂದು ಶಂಕಿಸಲಾಗಿದೆ. ಬೀಜಾಡಿಯ ಗೋಳಿಬೆಟ್ಟು ನಿವಾಸಿಯಾದ ವಿಲಾಸ್ ಮಾರ್ಬಲ್‌ನ ಮಾಲೀಕರಾದ ರಮೇಶ ಅಚಾರ್ಯ ಅವರ ಪುತ್ರನೇ ವಿರಾಜ್ ಆಚಾರ್ಯನಾಗಿದ್ದು, ಕಳೆದ ಅನೇಕ ವರ್ಷಗಳಿಂದ ಕುಮಟಾದ ಪಾಂಡುರoಗ ಇಂಟರ್‌ನ್ಯಾಶನಲ್ ಹೊಟೇಲ್ ಸಮೀಪವಿರುವ ವಿಲಾಸ್ ಮಾರ್ಬಲ್ ಅನ್ನು ವಿರಾಜ್ ಆಚಾರ್ಯ ಅವರು ನಡೆಸಿಕೊಂಡು ಬಂದಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ