Join Our

WhatsApp Group

ಗಂಡನ‌ ಬಗ್ಗೆ ಚಿಂತೆ : ವಿಷ‌ ಸೇವಿಸಿ ಮಹಿಳೆ ಸಾವಿಗೆ ಶರಣು

ಕಾರವಾರ: ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಗಡಗೇರಿ ಗ್ರಾಮ ಪಂಚಾಯತ್ ನ ಬಳಲೆಯಲ್ಲಿ ನಡೆದಿದೆ. ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಬಳಲೆಯ ಜಯಂತಿ ಸತೀಶ ಗೌಡ (32) ಆತ್ಮಹತ್ಯೆ ಮಾಡಿಕೊಂಡ‌ ಮಹಿಳೆ.‌ಪತಿ ಎಷ್ಟೇ ಹೇಳಿದರೂ ಸರಾಯಿ ಕುಡಿಯುವುದನ್ನು ಬಿಡುತ್ತಿಲ್ಲವೆಂದು ಮನನೊಂದ ಆಕೆ ಇಲಿಗೆ ಹಾಕುವ ಔಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಮುಂಜಾನೆ ಮನೆಯಲ್ಲಿ ವಿಷ ಸೇವಿಸಿದ್ದು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಮಹಿಳಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button