ಅಂಕೋಲಾ: ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಮೋಟಾರು ಬೈಕ್ ಕಳ್ಳತನ ಮಾಡಿದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೊರ್ವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಗೋಕರ್ಣ ನಾಡುಮಾಸ್ಕೇರಿ ನಿವಾಸಿ ದರ್ಶನ ಮೋಹನ ಸಾರಂಗ (18) ಬಂಧಿತ ಆರೋಪಿಯಾಗಿದ್ದು
ಈತ ಮತ್ತು ಇನ್ನೊರ್ವ ಆರೋಪಿತ ಸೇರಿ ಅಂಕೋಲಾ ತಾಲೂಕಿನ ಹೊನ್ನೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಗಿನ ಮಂಜಗುಣಿಯ ರಾಜು ಗಣಪತಿ ತಾಂಡೇಲ್ ಅವರ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಹೋಂಡಾ ಡಿಯೋ ಮೋಟರ್ ಬೈಕನ್ನು ಜುಲೈ 2 ರ ರಾತ್ರಿ ಕಳ್ಳತನ ಮಾಡಿದ್ದು ತಮ್ಮ ಮೋಟಾರು ಬೈಕ್ ಕಳ್ಳತನ ಆಗಿರುವ ಕುರಿತು ರಾಜು ತಾಂಡೇಲ್ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್,ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್. ಐ ಪ್ರವಿಣಕುಮಾರ್ ಮತ್ತು ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು.
ಕಾರ್ಯಪೃವೃತ್ತರಾದ ವಿಶೇಷ ತಂಡ ಆರೋಪಿಯನ್ನು ಬಂಧಿಸಿ ಕಳ್ಳತನ ಮಾಡಿದ ಸುಮಾರು 50 ಸಾವಿರ ಮೌಲ್ಯದ ಡಿಯೋ ವಾಹನ ಮತ್ತು ಕೃತ್ಯಕ್ಕೆ ಬಳಸಿದ 50 ಸಾವಿರ ರೂಪಾಯಿ ಮೌಲ್ಯದ ಟಿ.ವಿ.ಎಸ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಕಳುವಾದ ಬೈಕ್ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ ಅಂಕೋಲಾ ಪೊಲೀಸರ ಕಾರ್ಯಕ್ಕೆ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿಕ್ಕಿ ಬಿದ್ದ ಆರೋಪಿತ ವಯಸ್ಸಿನಲ್ಲಿ ಮತ್ತು ಮುಖ ಚಹರೆಯಲ್ಲಿ ಚಿಕ್ಕವನಂತೆ ಕಂಡರು ದೊಡ್ಡ ದೊಡ್ಡ ಗಾಡಿಗಳನ್ನು ಸಲೀಸಾಗಿ ಎಗರಿಸಬಲ್ಲ ಚಾಲಾಕಿ ಚಾಲಕ ಎಂದು ಸ್ಥಳೀಯರು ಆಡಿಕೊಂಡಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ