ಶಿರಸಿ: ಇಡೀ ರಾಜ್ಯದಲ್ಲೇ ಭರ್ಜರಿ ವಿದ್ಯಮಾನ ಸೃಷ್ಟಿ ಸಿದ್ದ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬoಧಿಸಿದoತೆ ಬೆಂಗಳೂರು ಸಿಐಡಿ ಪೋಲೀಸರು ಸಿದ್ದಾಪುರ ತಾಲೂಕಿನ ಪ್ರಭಾವಿ ವ್ಯಕ್ತಿಯೋರ್ವನನ್ನು ವಿಚಾರಣೆಗಾಗಿ ಬೆಂಗಳೂರು ಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಕಷ್ಟಪಟ್ಟು ಓದಿ ತರಬೇತಿ ಗಳಲ್ಲಿ ಉತ್ತೀರ್ಣ ರಾದ ಪಿಎಸ್‌ಐ ಹುದ್ದೇಯ ಅಭ್ಯರ್ಥಿ ಗಳ ಆಯ್ಕೆ ವಿಚಾರದಲ್ಲಿ ಭರ್ಜರಿ ಭ್ರಷ್ಟಾಚಾರ ನಡೆದಿದೆ ಎಂದು ಈಗಾಗಲೇ ಹಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆನಡೆಸುತ್ತಿದ್ದಾರೆ.
ಅದೇ ವಿಷಯಕ್ಕೆ ಸಂಬoಧಿಸಿದoತೆ ಸೋಮವಾರ ಸಿದ್ದಾಪುರ ತಾಲೂಕಿನ ಪ್ರಭಾವಿ ವ್ಯಕ್ತಿಯೋರ್ವನನ್ನು ಬೆಂಗಳೂರು ಅಧಿಕಾರಿಗಳ ತಂಡ ಆಗಮಿಸಿ ವಿಚಾರಣೆ ಗಾಗಿ ಕರೆದೊಯ್ದಿದ್ದಾರೆ ಎಂಬ ಬಿಸಿಬಿಸಿ ಚರ್ಚೆ ಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಈ ಪ್ರಭಾವಿ ವ್ಯಕ್ತಿ ಈ ಹಿಂದಿನಿoದಲೂ ಪೊಲೀಸ್ ಇಲಾಖೆ ಜೊತೆ ಸಂಬoಧ ಇಟ್ಟುಕೊಂಡಿದ್ದು ರಾಜ್ಯದ ಬಹುತೇಕ ಎಲ್ಲಾ ಪೋಲೀಸ್ ಹಿರಿಯ ಅಧಿಕಾರಿಗಳ ಜೊತೆ ಉತ್ತಮ ಸ್ನೇಹ ಹೊಂದಿದ್ದ ಎಂಬು ತಿಳಿದು ಬಂದಿದೆ. ಹೌದು, ಅಕ್ರಮ ಹಗರಣ ಸಂಬoಧ ಡಿವೈಎಸ್‌ಪಿ ಶಾಂತಕುಮಾರ್ ಜೊತೆ ಭಾಗಿಯಾಗಿದ್ದ ಗಣಪತಿ ಭಟ್ ನೆಲೆಮಾಂವ ಎಂಬುವವರನ್ನು ಸಿಐಡಿ ಪೊಲೀಸರು ತನಿಖೆ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇವರ ಬಂಧನದಿoದ ಇವರ ಸಂಪರ್ಕದಲ್ಲಿರುವ ಅಧಿಕಾರಿಗಳಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ. ಕುಗ್ರಾಮ ದಲ್ಲಿ ಕುಳಿತು ಇಂತಹ ಹಗರಣದಲ್ಲಿ ಹೇಗೆ ಶಾಮಿಲಾದ ಇತ ಎಂಬುದೇ ಈಗಿರುವ ಪ್ರಶ್ನೆ ಯಾಗಿದೆ ವಿಚಾರಣೆನಂತರವೇ ಈ ವಿಷಯ ಕ್ಕೆ ಸಂಬoಧಿಸಿದoತೆ ಸ್ಪಷ್ಟತೆ ಸಿಗಬೇಕಿದೆ.
ವಿಸ್ಮಯ ನ್ಯೂಸ್, ಶಿರಸಿ