ಸಾಮಾನ್ಯ ಮಕ್ಕಳೊಂದಿಗೆ ಸ್ಪರ್ಧೆ: 8 ಬಂಗಾರದ ಪದಕ ಹಾಗೂ 10 ಬೆಳ್ಳಿಯ ಪದಕ ಗೆದ್ದ ಬುದ್ದಿಮಾಂದ್ಯ ಶಾಲೆಯ ಮಕ್ಕಳು

ಕುಮಟಾ: ಇಲ್ಲಿನ‌ ದಯಾನಿಲಯದ ಬುದ್ಧಿಮಾಂದ್ಯ ಶಾಲೆಯ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಆಟವಾಡಿ 18 ಪದಕವನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕ್ರೀಡಾ ಇಲಾಖೆ ಉತ್ತರ ಕನ್ನಡ ಹಾಗು ಯುವ ಸಬಲೀಕರಣ‌ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರವಾರದಲ್ಲಿ ನಡೆದ ಪ್ರೇರಣೆ -2022 ಹೆಸರಿನಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕೆರಮ್, ಚೆಸ್ ಕ್ರೀಡಾ ಸ್ಪರ್ಧೆ ನಡೆದಿತ್ತು.‌

ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಅಂಡರ್ 18 ಹಾಗೂ 18 ರಿಂದ 21 ಹಾಗೂ ಓಪನ್ ಕೆಟಗರಿ ಮತ್ತು ಸಿಂಗಲ್ಸ್ ಹಾಗೂ ಡಬಸ್ಸಿನಲ್ಲಿ ದಯಾನಿಲಯದ ಬುದ್ಧಿಮಾಂದ್ಯ ಶಾಲೆಯ ಮಕ್ಕಳು 8 ಬಂಗಾರದ ಪದಕ ಹಾಗೂ 10 ಬೆಳ್ಳಿಯ ಪದಕಗಳನ್ನು ಪಡೆದಿದ್ದು ಈ‌ ಮೂಲಕ‌‌ ಸಾಧನೆ ಮಾಡಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Exit mobile version