ಶಾಲಾ ಸಂಸತ್ತು ಉದ್ಘಾಟನೆ ಮತ್ತು ಸಮವಸ್ತ್ರ ವಿತರಣಾ ಸಮಾರಂಭ

ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ದಿನಾಂಕ 15/07/2022 ರಂದು ಶಾಲಾ ಸಂಸತ್ ಉದ್ಘಾಟನೆ ಮತ್ತು ಸಮವಸ್ತç ವಿತರಣೆ ಸಮಾರಂಭ ನಡೆಯಿತು. ಶಾಲಾ ಸಂಸತ್ ಉದ್ಘಾಟಿಸಿದ ಶ್ರೀ ಎಸ್.ಜಿ.ಹೆಗಡೆ ಖ್ಯಾತ ನ್ಯಾಯವಾದಿಗಳು ಹೊನ್ನಾವರ ಇವರು ಮಾತನಾಡುತ್ತಾ ಶಾಲೆಯ ಪೂರ್ವ ವಿದ್ಯಾರ್ಥಿಯಾಗಿ ತಾವು ಕಳೆದ ಬಾಲ್ಯದ ದಿನಗಳನ್ನು ಸ್ಮರಿಸಿ ತಪ್ಪು ಮತ್ತು ಒಳಿತುಗಳ ಕಲ್ಪನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು.ಪ್ರಸ್ತುತ ಚುನಾವಣೆಯಲ್ಲಿ ಮತ ಚಲಾಯಿಸಿ ನಿಮ್ಮ ಪ್ರಧಾನಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಹಾಗೇ ಮುಂದೆ ಅಧಿಕೃತವಾಗಿ ಮತ ಚಲಾಯಿಸುವಾಗ ಜವಾಬ್ದಾರಿಯುತ ನಾಗರಿಕತ್ವದ ಕಲ್ಪನೆ ಬೆಳೆಸಿಕೊಳ್ಳಬೇಕು.ವಿದ್ಯೆ ಗಳಿಸುವುದರ ಜೊತೆಯಲ್ಲಿ ಕರ್ತವ್ಯ ನಿಷ್ಠೆಯಿಂದ ಕರ‍್ಯ ನಿರ್ವಹಿಸಿ ನಾಡಿನ ಸತ್ ಪ್ರಜೆಗಳಾಗಿರಿ ಎಂದು ಹಾರೈಸಿದರು.

ಕರ‍್ಯಕ್ರಮದ ಮುಖ್ಯ ಅತಿಥಿಗಳು ಕೊಡುಗೈದಾನಿಗಳು.ಶಾಲೆಯ ವಿದ್ಯಾರ್ಥಿ ಆದ ಶ್ರೀಎನ್.ಆರ್.ಹೆಗಡೆ ರಾಘೋಣ ಇವರು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿ ಮೌಲ್ಯಯುತ ಜೀವನ ನಡೆಸಿದ ಊರಿನ ಹಿರಿಯರು ಇಂದಿನ ಪೀಳಿಗೆಗೆ ಮಾದರಿ. ಸನ್ಮಾರ್ಗದ ಗುರಿಯೊಂದಿಗೆ ಉತ್ತಮ ಶಿಕ್ಷಣ ಪಡೆದು ಶಾಲೆಗೆ ಊರಿಗೆ ಕೀರ್ತಿಯನ್ನು ತರಬೇಕೆಂದು ಹೇಳಿದರು. ನಿವೃತ್ತ ಮುಖ್ಯಾಧ್ಯಾಪಕರು ಹಿರಿಯರು ಶ್ರೀ ಎಚ್.ಎನ್.ನಾಯ್ಕರವರು ಮಾತನಾಡಿ ಶಾಲಾ ಸಂಸತ್ತಿಗೆ ಆಯ್ಕೆಗೊಂಡ ಮಕ್ಕಳು ರಾಷ್ಟçದ ನೈಜ ಸಂಸತ್ತಿನ ತನಕ ಹೋಗಿ ಕೀರ್ತಿ ಬೆಳಗುವಂತಾಗಲಿ ಎಂದು ಹರಸಿದರು.

ನಿವೃತ್ತ ಕಂದಾಯ ಅಧಿಕಾರಿಗಳು ಶಾಲೆಯ ಹಿತೈಶಿಗಳು ಆದ ಶ್ರೀ ಕೆ. ಎಸ್.ಭಟ್ಟರವರು ಮಾತನಾಡಿ “ನನ್ನ ಶಾಲೆ ಬದುಕಿಗೆ ಅನ್ನ ನೀಡುವ ಸರಸ್ವತಿ ನಿಲಯ. ಹಿಂದೆ, ಇಂದು, ಮುಂದೆಯೂ ವಿದ್ಯಾದೀಪವಾಗಿ ಊರಿನ ಕತ್ತಲೆ ನಿವಾರಿಸುತ್ತದೆ” .ಎಂದು ಕಲಿತ ಶಾಲೆಯ ಕುರಿತು ಅಭಿಮಾನ ವ್ಯಕ್ತ ಪಡಿಸಿ“ ಬಾಲಕರಿಂದ ವೃದ್ಧರ ತನಕ ಅಪಾರ ಕೊಡುಗೆ ನೀಡಿದ ಊರಿನ ಹೆಮ್ಮೆಯ ಪುತ್ರ ಶ್ರೀಎನ್.ಆರ್.ಹೆಗಡೆ ರಾಘೋಣ ಅವರ ಕರ‍್ಯವನ್ನು ಶ್ಲಾಘಿಸಿ ಹರಸಿದರು. ಶಾಲೆಯ ಮುಖ್ಯಾಧ್ಯಾಪಕರಾದ ಶ್ರಿ ಎಲ್.ಎಂ.ಹೆಗಡೆಯವರು ಮಾತನಾಡಿ ಮುಂಜಾನೆ ಮುಸ್ಸಂಜೆಯ ಸಮ್ಮಿಲನಕ್ಕೆ ಸಾಕ್ಷಿಯಾದಂತೆ ಇಂದಿನ ವೇದಿಕೆ ರೂಪುಗೊಂಡಿದೆ. ಶಾಲೆಗಾಗಿ ಶಾಲೆಗೋಸ್ಕರ ಇರುವ ಪ್ರಭುತ್ವವೇ ಶಾಲಾ ಸಂಸತ್ತು,ಕಾನೂನಿಗೆ ಬಾಗಿ ನಡೆದರೆ ಅರಾಜಕತೆ ಎಂದೂ ಆವರಿಸುವುದಿಲ್ಲ ಎಂದು ಹೇಳಿದರು.

ಶ್ರೀ ಶ್ರೀಕಾಂತ ಹಿಟ್ನಳ್ಳಿಯವರು ಸ್ವಾಗತಿಸಿದರು. ಶ್ರೀ ಸುಬ್ರಹ್ಮಣ್ಯ ಭಟ್ಟರವರು ವಂದಿಸಿದರು. ಶ್ರೀಮತಿ ಮುಕ್ತಾ ನಾಯ್ಕ, ಶ್ರೀಮತಿ ಸೀಮಾ ಭಟ್ಟ ಕರ‍್ಯಕ್ರಮ ನಿರ್ವಹಿಸಿದರು. ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

Exit mobile version