ಉತ್ತರಕನ್ನಡದಲ್ಲಿ ಐದನೇ ಬಲಿ ಪಡೆದ ಕರೊನಾ

ತೀವ್ರವಾಗಿ ಕಾಡಿದ ಉಸಿರಾಟದ ಸಮಸ್ಯೆ
ಪರೀಕ್ಷೆಯಲ್ಲಿ ಕರೊನಾ‌ ದೃಢ

ಭಟ್ಕಳ: ಭಟ್ಕಳ ನಿಧಾನವಾಗಿ ಮತ್ತೆ ಕರೊನಾ ಹಾಟ್ ಸ್ಪಾಟ್ ಆಗಿ ಪರಿವರ್ತನೆ ಆಗುತ್ತಿದ್ದು, ಇಷ್ಟು ದಿನ ಸೋಂಕಿತರ ಸಂಖ್ಯೆಯಿಂದಲೇ ಜನ ಕಂಗಾಲಾಗುತ್ತಿದ್ದರು. ಈಗ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 69 ವರ್ಷದ ವ್ಯಕ್ತಿ ಕರನಾ ಸೋಂಕಿನಿಂದ ಸಾವನ್ನಪ್ಪಿದ್ದಾನೆ.‌
ತಾಲೂಕಿನ ವ್ಯಾಪ್ತಿಯ ಸುಲ್ತಾನ್ ಸ್ಟ್ರೀಟ್ ನ 69 ವರ್ಷದ ವ್ಯಕ್ತಿಯೂ ಕಳೆದ 3-4 ದಿನದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಶನಿವಾರದಂದು ಮುರುಡೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಔಷಧಿಯನ್ನು ನೀಡಿ ಕಳುಹಿಸಿದ್ದರು ಎನ್ನಲಾಗಿದೆ‌.
ನಂತರ ಮನೆಗೆ ಕರೆದುಕೊಂಡು ಬಂದ ಮನೆ ಮಂದಿಯು ರಾತ್ರಿ 12 ಗಂಟೆಗೆ ಇನ್ನಷ್ಟು ಹದಗೆಟ್ಟ ಉಸಿರಾಟದ ತೊಂದರೆಯಿಂದ ವ್ಯಕ್ತಿ ಮೃತಪಟ್ಟಿದ್ದಾನೆ‌‌.
ನಂತರ ಭಾನುವಾರಂದು ಬೆಳಿಗ್ಗೆ ಮ್ರತ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ಇಂದು ಮಧ್ಯಾಹ್ನ ಬಂದ ವರದಿಯು ಮೃತನಲ್ಲಿ ಕೊರನಾ ಪಾಸಿಟಿವ್ ಇರುವುದು ದ್ರಢಪಟ್ಟಿದೆ.‌

[sliders_pack id=”1487″]

ಮೃತ ದೇಹವನ್ನು ಪಿಪಿಇ ಬ್ಯಾಗನಲ್ಲಿ ಹಾಕಿ ಸಮಾದಿ ಮಾಡಲಾಗುವ ಸ್ಥಳವನ್ನು ಔಷಧಿ ಸಿಂಪಡಣೆ ಮಾಡಿ ಸಹಾಯಕ ಆಯುಕ್ತ ಭರತ್ ಎಸ್., ತಹಶಿಲ್ದಾರರ ಎಸ್. ರವಿಚಂದ್ರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳ ನೇತ್ರತ್ವದಲ್ಲಿ ಪಿಪಿಇ ಕಿಟ್ ಧರಿಸಿದ ಪೌರ ಕಾರ್ಮಿಕರು ಮೃತನ ಮನೆಯ ನಾಲ್ಕು ಮಂದಿಯ ಸಮ್ಮುಖದಲ್ಲಿ ಗೌಸಿಯಾ ಸ್ಟ್ರೀಟ್ ನಲ್ಲಿನ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿರುವ ಬಗ್ಗೆ ತಾಲೂಕಾ ಆರೋಗ್ಯಾಧಿಕಾರಿ ಖಚಿತಪಡಿಸಿದ್ದಾರೆ‌.

ಸದ್ಯ ಮ್ರತನ ಮನೆ ಮಂದಿ, ಕುಟುಂಬಸ್ಥರು ಹಾಗೂ ಆತನ ಸಂಪರ್ಕದಲ್ಲಿರುವವರ ಮಾಹಿತಿ ಕಲೆ ಹಾಕಿ ಎಲ್ಲರ ಗಂಟಲ ದ್ರವ ಪರೀಕ್ಷೆ ಮಾಡಲು ತಾಲೂಕಾಡಳಿತ ಸಿದ್ದಮಾಡಿಕೊಂಡಿದ್ದು ಸದ್ಯ ಮ್ರತನ ಮನೆ ಮಂದಿ ಮನೆಯಲ್ಲಿಯೇ ಕ್ವಾರಂಟೈನನಲ್ಲಿದ್ದಾರೆ‌ ಎಂದು ತಿಳಿದು ಬಂದಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ನಿನ್ನೆ ಮೃತಪಟ್ಟಿದ್ದು ಗಂಟಲ‌ದ್ರವ ಪರೀಕ್ಷೆಯ ಬಳಿಕ ಪಾಸಿಟಿವ್ ದ್ರಢಪಟ್ಟಿದೆ. ಸರಕಾರದ ಆದೇಶದಂತೆ ತಾಲೂಕಾಡಳಿತ, ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಗಳ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಭಟ್ಕಳದಲ್ಲಿ ಇದು ಮೊದಲ ಸಾವಿನ ಪ್ರಕರಣ ಆಗಿದ್ದು ಜನರು ಭಯಪಡುವ ಅವಶ್ಯಕತೆ ಇಲ್ಲ‌. ಮೃತನ ಸಂಪರ್ಕಿತರ ಕ್ವಾರಂಟೈನ್ ಮತ್ತು ಅವರ ಮಾಹಿತಿ ಕಲೆ ಹಾಕಿ ಗಂಟಲ ದ್ರವ ಪರೀಕ್ಷೆ ಮಾಡಲಾಗುವುದು.
-ಎಸ್. ರವಿಚಂದ್ರ- ತಹಸೀಲ್ದಾರ- ಭಟ್ಕಳ

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Exit mobile version