ಕುಮಟಾ: ಹಗಲಿರುಳೆನ್ನದೆ ಮಹಾಮಾರಿಯ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್‍ಗಳಾದ ವೈದ್ಯರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ವಿಷಯವಾಗಿದೆ. ನಿನ್ನೆ ಕುಮಟಾದ ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಖಾಸಗಿ ಆಸ್ಪತ್ರೆಯ ಮತ್ತೊಬ್ಬರು ವೈದ್ಯರಿಗೆ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಸದ್ಯ ಇವರು ಮಂಗಳೂರಿನಲ್ಲಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‍ನಲ್ಲಿ ಈ ಮಾಹಿತಿ ಅಧಿಕೃತಗೊಳ್ಳಲಿದೆ ಮತ್ತು ನಿಖರ ಅಂಕಿ-ಸಂಖ್ಯೆ ಲಭ್ಯವಾಗಲಿದೆ. ಅಲ್ಲದೆ, ಈ ಕುರಿತ ಹೆಚ್ಚಿನ ಮಾಹಿತಿ ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‍ನಲ್ಲಿ ವೀಕ್ಷಿಸಬಹುದು.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್