ಕುಮಟಾ: “ಪರಿಸರ ಮಾತೆ ಈಗ ಮನುಷ್ಯನ ಪೀಡೆಯನ್ನು ಸಹಿಸಿಕೊಳ್ಳುತ್ತಿರಬಹುದು, ಅದು ತಿರುಗಿ ನಿಂತಿಂತೆಂದಾದರೆ ಮನುಷ್ಯ ಕುಲದ ಅಳಿವಿಗೆ ಅರೆಕ್ಷಣ ಸಾಕು ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕಾಗಿದೆ” ಎಂದು ಭಾರತೀಯ ವಿಜ್ಞಾನ ಸಂಸ್ಥೆ ಕುಮಟಾದ ಪರಿಸರ ವಿಜ್ಞಾನಿ ಡಾ. ಸುಭಾಶ್ಚಂದ್ರನ್ ನುಡಿದರು. ಅವರು ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾ ಶಾಖೆ ಹಾಗೂ ಪ್ರಕೃತಿ ಇಕೋ ಕ್ಲಬ್ ಮತ್ತು ವಿಜ್ಞಾನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವನಮಹೋತ್ಸವ ಮತ್ತು “ಅರಣ್ಯ ಸಂರಕ್ಷಣೆ ಮಹತ್ವ” ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯನ್ನು ವಿಕೃತಿಯನ್ನಾಗಿಸಬಾರದು ಪರಿಸರವನ್ನು ಸುಸ್ಥಿರ ಮಾಡಬೇಕು. ಬೀಳುವ ಮಳೆಯನ್ನು ಸಂಗ್ರಹಿಸಿ ಅಂತರ್ಜಲ ಹೆಚ್ಚುವಂತೆ ಮಾಡಬೇಕು. ಔಷಧಿ ಸಸ್ಯಗಳ ಪ್ರಾತ್ಯಕ್ಷಿತೆಯನ್ನು ಅತ್ಯಂತ ಸರಳವಾಗಿ ಮನೆಯ ಸುತ್ತಮುತ್ತಲಿನಲ್ಲಿರುವ ಗಿಡಗಳ ಕುರಿತು ಅವುಗಳ ಉಪಯೋಗದ ಬಗ್ಗೆ ಪ್ರೊಜೆಕ್ಟರ್ ಮೂಲಕ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ. ಎನ್. ನಾಯಕರವರು ಉತ್ತರಕನ್ನಡಕ್ಕೆ ಬಂದ ಅನೇಕ ಪರಿಸರ ಮಾರಕ ಯೋಜನೆಯನ್ನು ತಡೆಯುವಲ್ಲಿ ಪರಿಸರ ವಿಜ್ಞಾನಿ ಡಾ|| ಸುಭಾಶ್ಚಂದ್ರನ್ ಅವರ ಸೇವೆ ಅತ್ಯಂತ ಮಹತ್ತರವಾದದ್ದು ಎಂದರು. ಅಲ್ಲದೇ ಮಾನವ ಪ್ರಕೃತಿಯ ಕೂಸು ಅನುಭವದ ಮಾತಿದು. ಈ ಸ್ಥಾನ ಅವನಿಗೆ ಪ್ರಾಪ್ತವಾಗಿರುವುದು ಅವನ ಮಾನವೀಯತೆಯಿಂದಲ್ಲ. ಬದಲಾಗಿ ಪರಿಸರದ ಕೊಡುಗೆಯಿಂದಾಗಿ ಎಂದರು.
ರಾಜೀವ ಗಾಂವಕರ ಆಶ್ರಯ ಪೌಂಡೇಶನ ಹಿರೇಗುತ್ತಿ ಮಾತನಾಡಿ “ಅರಣ್ಯ ಸಂರಕ್ಷಣೆಯ ಮಹತ್ವದ ಕುರಿತು ಅತ್ಯಂತ ಚೆನ್ನಾಗಿ ಮಾತನಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶಾಲಾ ಪರಿಸರವನ್ನು ಸ್ವಚ್ಛವಾಗಿಡುವಂತೆ ನಾವು ದಿನನಿತ್ಯದ ಬಳಕೆಯಲ್ಲಿ ಉಪಯೋಗಿಸಿದ ಪ್ಲಾಸ್ಟಿಕನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು”.
ಮುಖ್ಯಾಧ್ಯಾಪಕ ರೋಹಿದಾಸ ಎಸ್. ಗಾಂವಕರರವರು “ಈ ಪರಿಸರದಲ್ಲಿ ಅಂದ ಉಂಟು, ಚೆಂದ ಉಂಟು ಈ ಪ್ರಕೃತಿಯನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದೇ ಆದರೆ ಅಮರತ್ವವು ಉಂಟು, ಈ ಲೋಕ ನಾಕವಾಗಬೇಕೆ, ಹೊರತು ನರಕವಾಗಬಾರದು” ಎಂದರು.
8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ “ಅರಣ್ಯ ಸಂರಕ್ಷಣೆಯ ಮಹತ್ವ” ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು. ಪ್ರಥಮ ಸ್ಥಾನ ಸುವರ್ಣ ಮಂಜುನಾಥ ಭಂಡಾರಕರ, ದ್ವಿತೀಯ ಸ್ಥಾನ ಶಿವಪ್ರಸಾದ ರಾಮಚಂದ್ರ ನಾಯಕ ಮೊಗಟಾ ಹಾಗೂ ತೃತೀಯ ಸ್ಥಾನ ಸಾನಿಕಾ ಜಟ್ಟಿ ನಾಯ್ಕ ಪಡೆದುಕೊಂಡರು. ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಹುಮಾನವನ್ನು ನೀಡಲಾಯಿತು. ಶಿಕ್ಷಕ ಮಹಾದೇವ್ ಗೌಡರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗಾಯತ್ರಿ ನಾಯ್ಕ, ಹಿರೇಗುತ್ತಿ ವಲಂಯ ಅರಣ್ಯದ ಅಧಿಕಾರಿ ಪ್ರದೀಪ ನಾಯ್ಕ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ. ಬಿ. ಕೆರರೆಮನೆ, ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್. ನಾಗರಾಜ ನಾಯಕ, ವಿಶ್ವನಾಥ ಬೇವಿನಕಟ್ಟೆ, ಇಂದಿರಾ ನಾಯಕ, ಜಾನಕಿ ಗೊಂಡ, ಬಾಲಚಂದ್ರ ಅಡಿಗೋಣ, ಶಿಲ್ಪಾ ನಾಯಕ, ಮದÀನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗ, ಗೋವಿಂದ ನಾಯ್ಕ, ಉಪಸ್ಥಿತರಿದ್ದರು. ಹೈಸ್ಕೂಲಿನ ವಿದ್ಯಾರ್ಥಿನಿ ನಾಗಶ್ರೀ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಪ್ರತಿನಿಧಿ ಎಮ್.ಜಿ. ನಾಗಭೂಷಣ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತಿನಿಧಿ ಕಾಂಚಿಕಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ಎನ್ ರಾಮು ಹಿರೇಗುತ್ತಿ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ವಿಜೇತ ಗುನಗ ವಂದಿಸಿದರು.
ವರದಿ ; ರಾಮು ಎನ್ ಹಿರೇಗುತ್ತಿ